ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗುಡಿಹಾಳ ರೋಡ್ನಲ್ಲಿರುವ ಫಿಗರಿ ಫಾರ್ಮ್ನಲ್ಲಿ ಇತ್ತೀಚೆಗೆ ಹಂದಿ ಕಳ್ಳತನ ಮಾಡಿದವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಫಾರ್ಮ್ನ ಕಾಂಪೌಂಡ್ ಒಡೆದು ಸುಮಾರು 53 ಹಂದಿಗಳನ್ನು ಕದ್ದೊಯ್ದ ಕಳ್ಳರು, ಅವುಗಳನ್ನು ಮಾರಾಟ ಮಾಡಿದ್ದರು. ಆ ಹಣದಲ್ಲಿ ಮೊಬೈಲ್ ಖರೀದಿಸಿದ್ದರು. ಹಳೇ ಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ಎ.ಜಿ. ಚವ್ಹಾಣ ನೇತೃತ್ವದ ತಂಡವು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 15,500 ರೂ. ಹಾಗೂ ಒಂದು ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
11/02/2022 09:02 am