ಹುಬ್ಬಳ್ಳಿ: ಕಾಲೇಜ್ ಲೈಪ್ ನಲ್ಲಿ ಇಬ್ಬರ ಪರಿಚಯವಾಗಿತ್ತು. ಈ ಪರಿಚಯದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಪಾರ್ಕ್, ಹೊಟೇಲ್ ಗಳಿಗೆ ಕೈ ಕೈ ಹಿಡಿದು ಸುತ್ತಾಡಿದ್ದರು. ಇನ್ನೇನೂ ಹಸೆಮಣೆ ಏರಬೇಕಿದ್ದ ಹುಡುಗಿ ಮಾತ್ರ ಈಗ ಆಸ್ಪತ್ರೆ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಹಾಗಿದ್ದರೇ ಆ ಲವ್ ಸ್ಟೋರಿಯಲ್ಲಿ ನಡೆದಿದ್ದಾದರೂ ಏನು ಅಂತೀರಾ ಇಲ್ಲಿದೆ ನೋಡಿ ಹಳ್ಳಿಯ ಪ್ರೇಮ ಕಹಾನಿ...
ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಕೆಯ ಹೆಸರು ಸಾವಿತ್ರಿ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹುಲಿಗನಕಟ್ಟಿ ಗ್ರಾಮದ ಯುವತಿ. ಕಾಲೇಜಿಗೆ ಹೋಗುವಾಗ ತಂದೆ ತಾಯಿ ಆಸೆಯಂತೆ ವಿದ್ಯಾಭ್ಯಾಸಕ್ಕೆ ಗಮನ ಹರಿಸಿದ್ದರೇ ಈಕೆ ಇವತ್ತು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಓದುವುದನ್ನು ಬಿಟ್ಟು ಪ್ರೀತಿ ಪ್ರೇಮ ಅಂತಾ ಧಾರವಾಡದ ಕಾಲೇಜು ದಿನಗಳಲ್ಲಿ ಪರಿಚಯವಾದ ಕಲಘಟಗಿ ತಾಲೂಕಿನ ಆಸ್ತಕಟ್ಟಿ ಗ್ರಾಮದ ಯುವಕ ಮೋಹನನ ಮೋಹದ ಬಲೆಯಲ್ಲಿ ಬಿದ್ದಿದ್ದಳು. ಹುಡುಗನ ಮೋಹಕ ಮಾತಿಗೆ ಮರಳಾಗಿ ಲವ್ ಅಂತಾ ಸಿಕ್ಕ ಸಿಕ್ಕ ಪಾರ್ಕ್ ಗಳಿಗೆ ಸುತ್ತಾಡಿದ್ದಳು. ಅಂದದ ಹುಡುಗನ ತೆಕ್ಕೆಯಲ್ಲಿ ಕಾಲ ಕಳೆದಿದ್ದಳು. ಮೊದ ಮೊದಲು ಎಲ್ಲವು ಚೆನ್ನಾಗಿತ್ತು. ಹುಡುಗ ಮಂಗಳೂರಿನಲ್ಲಿ ಪೊಲೀಸ್ ನೌಕರಿಗೆ ಸೇರಿದ ಮೇಲು ಇಬ್ಬರು ಸೇರುವುದು ಮುಂದುವರಿದಿತ್ತು. ಆದರೆ ಅದ್ಯಾವಾಗ ತನ್ನನ್ನು ಮದಯವೆಯಾಗುವಂತೆ ಹುಡುಗಿ ಹೇಳುತ್ತಿದ್ದಂತೆ ಹುಡುಗ ಪ್ರೀತಿಗೆ ಬ್ರೇಕ್ ಹಾಕಿದ್ದಾನೆ. ಮದುವೆಯಾಗಲು ನಿರಾಕರಿಸುತ್ತಿದ್ದಂತೆ ಮನನೊಂದ ಹುಡುಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ನಡುವಿನ 7 ವರ್ಷದ ಪ್ರೀತಿ ಯುವಕನಿಗೆ ಬೊರ್ ಆಗಿತ್ತು. ಮದ್ವೆಗೆ ಒಲ್ಲೆ ಎಂದ ಪ್ರೀಯತಮನ ವಿರುದ್ದ ಕಲಘಟಗಿ ಪೊಲೀಸ್ ಠಾಣೆಗೆ ದೂರು ನೀಡಿದ ಯುವತಿ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾಳೆ. ಆಗ ಮದುವೆಯಾಗುವುದಾಗಿ ಹೇಳಿದ್ದ ಮೋಹನ್, ಗ್ರಾಮದ ಹಿರಿಯರ ಸಮ್ಮುಖದಲ್ಲಿಯು ಒಪ್ಪಿಕೊಂಡಿದ್ದ. ಹುಡುಗನ ಮಾತಿನಿಂದ ಫುಲ್ ಖುಷಿಯಾಗಿದ್ದ ಯುವತಿ, ಮದುವೆಯಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದಳು. ದಾರಿ ತಪ್ಪಿದ್ದ ಮಗಳ ಬಾಳು ಮತ್ತೆ ಸರಿದಾರಿಗೆ ಬಂತಲ್ಲ ಅಂತ ಯುವತಿ ಪೋಷಕರು ಲಗ್ನ ಪತ್ರ ಪ್ರಿಂಟ್ ಹಾಕಿದ್ದರು. ಖುಷ್ ಖುಷಿಯಿಂದ ಮಗಳ ಮದುವೆ ಕಾರ್ಯ ಸುರು ಮಾಡಿದ್ದರು. ಆದರೆ ಹುಡುಗ ಮಾತ್ರ ಮದುವೆಗೆ ರೆಡಿ ಇರಲಿಲ್ಲ. ಮದುವೆ ಆಗಲ್ಲ ಅದೇನ್ ಮಾಡ್ಕೋತಿಯೋ ಮಾಡ್ಕೋ ಅಂತಾ ಯುವತಿಗೆ ಧಮ್ಕಿ ಹಾಕಿದ್ದ. ಇಷ್ಟೆ ನೋಡಿ ಮನನೊಂದ ಹುಡುಗಿ ವಿಷ ಕುಡಿದಿದ್ದಾಳೆ.
Kshetra Samachara
05/02/2022 07:52 pm