ಕಲಘಟಗಿ : ವಂಚನೆ ಮೂಲಕ ಕಬಳಿಸಿದ ಆಸ್ತಿಯನ್ನು ಮರಳಿ ಕೊಡದೆ ದೌರ್ಜನ್ಯವೆಸಗಿದ್ದಕ್ಕಾಗಿ ನೊಂದು ರೈತನೊಬ್ಬ ಕುಟುಂಬ ಸಹಿತ ಆತ್ಮತ್ಯೆಗೆ ಯತ್ನಸಿದ ಘಟನೆ ಜಿನ್ನೂರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಜಿನ್ನೂರ ಗ್ರಾಮದ ರೈತ ನಾದ ಚನಬಸಪ್ಪ ತಿಪ್ಪಣ್ಣ ಕೃಷ್ಣ ಮನವರ್ ಎಂಬವರ 1ಎಕರೆ 34 ಗುಂಟೆ ಜಮೀನನ್ನು ಹಾರೂಗೇರಿ ಗ್ರಾಮದ ಶಂಕರ್ ರೊಟ್ಟಿಗವಾಡ ಎನ್ನುವರು ಬೆಳೆಸಾಲ ಕೊಡಿಸುವುದಾಗಿ ನಂಬಿಸಿ ಕಲಘಟಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದರು.
ನಂತರ ರೊಟ್ಟಿಗವಾಡ ಅದನ್ನು ಮಂಜುನಾಥ್ ಮುರಳಿ ಹಾಗೂ ಕಲ್ಲಪ್ಪ ತೊಂಡಿಹಾಳ ಇವರಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ.
ಮೋಸಹೋದ ರೈತ ಹಣ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯವೆಸಗಿದ್ದು ಇದರಿಂದ ಬೇಸತ್ತು ಅವರು ಮಕ್ಕಳು ಹೆಂಡತಿ ಸಹಿತ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದನ್ನು ತಿಳಿದು ರೈತ ಮುಖಂಡರಾದ ಲೀಲಾವತಿ ವಾಗ್ಮೊಡೆ ರವಿ ಕಾಂಬಳೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಕಲಘಟಗಿ ಪಿಐ ಪ್ರಭು ಸೂರಿನ್ ತನಿಖೆ ಕೈಗೊಂಡಿದ್ದಾರೆ.
Kshetra Samachara
04/02/2022 11:06 am