ಹುಬ್ಬಳ್ಳಿ: ಹಾಡಹಗಲೇ ಮನೆಯ ಮುಂಬಾಗಿಲಿನ ಕಿಲಿ ಮುರಿದು ಅಂದಾಜು 1.27 ಲಕ್ಷ ರೂ. ಮೌಲ್ಯದ 44 ಗ್ರಾಂ ಚಿನ್ನಾಭರಣ , 10 ಗ್ರಾಂ ಬೆಳ್ಳಿ ಸಾಮಗ್ರಿ ಕಳುವು ಮಾಡಿದ ಘಟನೆ ಗದಗ ರಸ್ತೆ ಸರಸ್ವತಿಪುರಂನಲ್ಲಿ ನಡೆದಿದೆ.
ರೈಲ್ವೆ ಸಿಬ್ಬಂದಿ ಲಲಿತಾ ಎಂಬುವರು ಬೆಳಗ್ಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ಬರುವುದರೊಳಗೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಈ ಕುರಿತು ಕೇಶ್ವಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/02/2022 01:27 pm