ಹುಬ್ಬಳ್ಳಿ: ಪತ್ನಿ ಸೇರಿದಂತೆ ಅನೇಕರ ಕಿರುಕುಳದಿಂದ ಮನನೊಂದು ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ವ್ಯಕ್ತಿ ಓರ್ವ ಸ್ವಂತ ಮನೆಯಲ್ಲಿ ನೇಣಿಗೆ ಶರಣಾದ ಪ್ರಕರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಹ್ಮದ್ ರಫೀಕ್ ನದಾಫ ಎಂಬಾತ ಆತ್ಮಹತ್ಯೆ ಮಾಡಿಕೊಂಡವನು. ಇತನಿಗೆ ಪತ್ನಿ ಆಸ್ಮಾ, ಅತ್ತೆ ಸಾಹೇಬ್ಬಿ ಮತ್ತು ಪಕ್ಕದ ಮನೆಯ ಮುದಕಪ್ಪ ಮತ್ತು ಮಾಂತ್ಯಾ ಎಂಬುವರು ಕಿರುಕುಳ ನೀಡಿದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮೃತನಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Kshetra Samachara
01/02/2022 08:33 am