ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಯೋರ್ವ ಮತ್ತೊಬ್ಬರ ಹೆಸರು ಹೇಳಿಕೊಂಡು ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಪ್ರಕರಣ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರವೀಂದ್ರನಾಥ ಎಂಬುವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ನಾನು ಅಕ್ಬರ್ ಪಾಷಾನ ಕಡೆಯವನು. ಇತ್ತೀಚೆಗೆ ಟೊಯೋಟಾ ಪೈನಾನ್ಸ್, ಟೊಯೋಟಾ ಕಂಪನಿ ಹಾಗೂ ವಿಡಿಯೋಕಾನ್ ಲೀಬರ್ಟಿ ವಿಮಾ ಕಂಪನಿ ಹಾಕಿದ ಪ್ರಕರಣ ಹಿಂಪಡೆಯಬೇಕು. ವಾಹನವು ಯಾರ ಮಾಲಿಕತ್ವದಲ್ಲಿದೆ ಅದನ್ನು ಆರ್‌ಟಿಒಗೆ ಹೋಗಿ ಬದಲಾಯಿಸಿಕೊಡಬೇಕು. ಇಲ್ಲವಾದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
Kshetra Samachara
26/01/2022 10:02 am