ಹುಬ್ಬಳ್ಳಿ: ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಪ್ರೀತಿ ಎಲ್ಲವನ್ನೂ ಮೀರಿದ್ದು ಅನ್ನೋದು ಪ್ರೇಮಿಗಳ ಭಾವನೆ. ಅಂತಹ ಪ್ರೀತಿಗೆ ಸದ್ಯ ಪೋಷಕರ ವಿರೋಧ ಹೆಚ್ಚಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಯುವ ಪ್ರೇಮಿಗಳಿಗೆ ಪೋಷಕರೆ ವಿಲನ್ ಆಗಿದ್ದಾರೆ.
ಹೀಗೆ ಮದುವೆಯಾದ ಸರ್ಟಿಫಿಕೇಟ್ ಹಿಡಿದು ನಿಂತಿರುವ ಇವರು ಕಳೆದ 5 ತಿಂಗಳ ಹಿಂದೆ ಮದುವೆಯಾದ ಪ್ರೇಮಿಗಳು. ಮೂಲತಃ ಧಾರವಾಡ ಜಿಲ್ಲೆಯವರಾದ ಇವರಿಬ್ಬರು ಸದ್ಯ ಪೋಷಕರ ಆತಂಕಕ್ಕೆ ಒಳಗಾಗಿ ನಮ್ಮ ಜೀವ ಉಳಿಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಯುವತಿ ಶಾಂತವ್ವ ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಮಂಜುನಾಥ್ ನಡುವೆ 2 ವರ್ಷಗಳ ಹಿಂದೆಯೇ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಇಬ್ಬರು ಒಬ್ಬರಿಗೊಬ್ಬರು ಬಿಟ್ಟಿರಿಲಾರದ ಹಾಗೆ ಪ್ರೀತಿಸಿದ್ದರು. ನಂತರ ಮನೆಯವರಿಗೂ ಸಹ ಪ್ರೀತಿಯ ವಿಷಯವನ್ನು ಹೇಳಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡ ಬಂದ ಹಿನ್ನೆಲೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೂ ಸಹ ಇವರಿಬ್ಬರೂ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದಾರೆ.
ಇನ್ನೂ ಇವರಿಬ್ಬರೂ ಮದುವೆಯಾಗಿ ಬರೋಬ್ಬರಿ 5 ತಿಂಗಳೇ ಕಳೆದಿದೆ. ಮದುವೆಯಾದಗಿನಿಂದ ಹೆಣ್ಣಿನ ಮನೆಯವರಿಂದ ನಿತ್ಯ ಜೀವ ಬೆದರಿಕೆ ಬರುತ್ತಿದ್ದು, ಏನೇ ಆದರೂ ಹುಡುಗನನ್ನು ಮಾತ್ರ ಬಿಡುವುದಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರಂತೆ. ಹೀಗಾಗಿ ಸದ್ಯ ನೊಂದಿರುವ ಪ್ರೇಮಿಗಳು ನಮ್ಮ ಜೀವವನ್ನ ಉಳಿಸಿ ಅಂತ ಪೊಲೀಸ್ ಠಾಣೆ ಮೆಟ್ಟಿಲೆರಿದ್ದಾರೆ. ಜಾತಿಯ ಕಾರಣಕ್ಕೆ ಪ್ರೇಮಿಗಳ ಮದುವೆಗೆ ವಿರೋಧ ಹೆಚ್ಚಿದ್ದು ನಾವು ನಮ್ಮ ಪಾಡಿಗೆ ಬದುಕಲು ಬಿಡಿ ಅಂತ ಕೇಳಿಕೊಳ್ಳುತ್ತಿದ್ದಾರೆ. ಕಳೆದ ವಾರದಿಂದ ಪ್ರೇಮಿಗಳಿಬ್ಬರಿಗೂ ಜೀವ ಬೆದರಿಕೆ ಹೆಚ್ಚಾದಂತೆ ಪೊಲೀಸರು ನಮ್ಮನ್ನ ಕಾಪಾಡಬೇಕು ಅಂತ ಕೇಳಿಕೊಂಡಿದ್ದಾರೆ.
Kshetra Samachara
22/01/2022 08:13 am