ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರೇಯಸಿಯ ಮನೆ ಹಿತ್ತಲಲ್ಲಿ ಪ್ರೇಮಿಯ ಬರ್ಬರ ಹತ್ಯೆ: ಅನೈತಿಕ ಸಂಬಂಧಕ್ಕೆ ಬಲಿ ಆಯ್ತು ಜೀವ.....!

ಹುಬ್ಬಳ್ಳಿ: ಆತ ಜೆಸಿಬಿ ಹಾಗೂ ಟೆಂಪೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ, ಮದುವೆಯಾಗಿ ಎರಡೂ ಮಕ್ಕಳಿದ್ದರೂ ಮತ್ತೊಬ್ಬಳ್ಳ ಮೇಲೆ ಕಣ್ಣು ಬಿದ್ದಿತ್ತು. ಆಕೆಯೆ ಜೊತೆ ಪ್ರೀತಿ ಪ್ರೇಮ ಸುತ್ತಾಡ ತೊಡಗಿದ್ದ.‌ಮೊನ್ನೆಯೂ ಆಕೆ ಪೋನ್ ಮಾಡಿ ಆತನನ್ನು ಮನೆಗೆ ಕರೆಯಿಸಿದ್ದಾಳೆ. ಅಷ್ಟೇ ಹಾಗೆ ಹೋದ ಅತ ವಾಪಸ್ ಬಂದಿದ್ದು ಮಾತ್ರ ಹೆಣವಾಗಿ.

ಮನೆಯ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು. ಮನೆಯ ಮುಂದೆ ಜಮಾಯಿಸಿರುವ ಸಂಬಂಧಿಕರು‌. ಇನ್ನೂ ಅಲ್ಲಲ್ಲಿ ಹಾಗೇ ಬಿದ್ದಿರುವ ರಕ್ತದ ಕಲೆಗಳು. ಇಂತೆದೆಲ್ಲಾ ರಣಭೀಕರ ದೃಶ್ಯಗಳು ಕಂಡು ಬಂದಿದ್ದು, ಧಾರವಾಡ ಜಿಲ್ಲೆ‌ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಅಂದಹಾಗೇ ಇಲ್ಲಿ ಭೀಕರವಾಗಿ ಕೊಲೆಯಾಗಿ ಬಿದ್ದಿದ್ದು ಮಂಜುನಾಥ ಮರೆಪ್ಪನವರ್ ಅಂತ, ಅದೇ ಗ್ರಾಮದ ನಿವಾಸಿ. ಅಂದಹಾಗೇ ಈ ಕೊಲೆಗೆ ಕಾರಣ ಅನೈತಿಕ ಸಂಬಂಧ ಕಾರಣವಂತೆ. ಈ ಮಂಜುನಾಥ ಅದೇ ಗ್ರಾಮದ ಲಕ್ಷ್ಮೀ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಇಬ್ಬರ ಮಧ್ಯೆ ಪ್ರೀತಿ ಪ್ರೇಮ ಎಲ್ಲವೂ ಆಗಿತ್ತು. ಇತ್ತ ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದವು. ಆದರೂ ಮಂಜನಾಥ ಆಕೆಯನ್ನು ಬಿಟ್ಟಿರಲಿಲ್ಲ. ಆಕೆಯೂ ಗಂಡನನ್ನೆ ಬಿಟ್ಟು ಇವನಿಗಾಗಿ ತವರು ಮನೆಯಲ್ಲಿದ್ದಳಂತೆ. ಇಬ್ಬರ ಈ ಅನೈತಿಕ ಸಂಬಂಧ ಊರ ಮಂದಿಗೆಲ್ಲಾ ಗೊತ್ತಾಗಿತ್ತು. ಹೀಗಾಗೇ ಮನೆ ಮರ್ಯಾದೆ ಹೋಗುತ್ತದೆ ಅಂತ ಯುವತಿ ಅಣ್ಣ ಬಸವರಾಜ್ ಕುರಡಿಕೇರಿ ಮಂಜುನಾಥಗೆ ವಾರ್ನ್ ಮಾಡಿದ್ದ, ಅಲ್ಲದೆ ಊರ ಹಿರಿಯ ಸಮ್ಮುಖದಲ್ಲಿಯೂ ರಾಜಿ ಪಂಚಾಯ್ತಿ ಮಾಡಿ ಆಕೆಯನ್ನು ಬಿಟ್ಟುಬಿಡು ಅಂತ ಹೇಳಿದ್ದ. ಆದರೆ ಇವರು ಮಾತ್ರ ಕದ್ದು ಮುಚ್ಚಿ ಸೇರುವುದನ್ನು ಬಿಟ್ಟಿರಿಲ್ಲ. ಇದು ಹೀಗಾದರೂ ನಿಲ್ಲಲ್ಲ ಅಂತ ತಿಳಿದ ಬಸವರಾಜ್ ಉಪಾಯವಾಗಿ ತ‌ನ್ನ ತಂಗಿಯಿಂದಲೇ ಪೋನ್ ಮಾಡಿಸಿ ಮನೆಗೆ ಕರೆಯಿಸಿದ್ದಾನೆ. ಅಷ್ಟೆ ಅಲ್ಲಿ ಮಾತಿಗೆ ಮಾತು ಬೆಳೆದು ಮನೆಯ ಹಿತ್ತಲಲ್ಲಿ ಕಲ್ಲು ಹಾಗೂ ಮಾರಕಾಸ್ತ್ರಗಳಿಂದ ಕೊಲೆಯೆ ಮಾಡಿಬಿಟ್ಟಿದ್ದ.

ಸದ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಕೊಲೆಗಾರ ಬಸವರಾಜನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನೂ ಲಕ್ಷ್ಮೀ ಹುಬ್ಬಳ್ಳಿ ಬಳಿಯ ತಾರಿಹಾಳ ಕೈಗಾರಿಕ ಪ್ರದೇಶದ ಗಾರ್ಮೇಂಟ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಮಂಜುನಾಥ ಟೆಂಪೋದಲ್ಲಿ, ಪ್ರತಿದಿನ ಆಕೆಯನ್ನು ಫಿಕಫ್ ಡ್ರಾಪ್ ಮಾಡ್ತಿದ್ದ ಮಂಜುನಾಥ ಆಕೆಯನ್ನ ಬಲೆಗೆ ಬಿಳಿಸಿಕೊಂಡಿದ್ದ.‌ ಮನೆಯಲ್ಲಿ ಹೆಂಡ್ತಿ ಮಕ್ಕಳಿದ್ದರೂ, ಮತ್ತೊಬ್ಬಳ ಮೋಹಕ್ಕೆ ಬಲಿಯಾಗಿದ್ದ, ಇತ್ತ ಲಕ್ಷ್ಮೀ ಕೂಡಾ ಮದುವೆಯಾದರೂ ಮಂಜುನಾಥನಿಗೋಸ್ಕರ ಗಂಡನ ಮನೆ ಬಿಟ್ಟು ತವರು ಮನೆಯಲ್ಲಿದ್ದಳು. ಎಷ್ಟೇ ಭಾರಿ ರಾಜಿ ಪಂಚಾಯಿತಿ, ಸಂದಾನವಾದರೂ ಇಬ್ಬರು ತಮ್ಮ ಸಂಬಂಧ ಬಿಟ್ಟಿರಲಿಲ್ಲ. ಸಧ್ಯ ಆಕೆಯ ಪೋನ್ ಕಾಲಿಗೆ ಕರೆಗೊಟ್ಟು ಹೊದವ ಹೆಣವಾಗಿ ಹೋಗಿದ್ದಾನೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/01/2022 04:25 pm

Cinque Terre

88.89 K

Cinque Terre

9

ಸಂಬಂಧಿತ ಸುದ್ದಿ