ಕುಂದಗೋಳ : ಯುವಕನೋರ್ವ ಮನೆಯೊಂದರ ಬಾಗಿಲು ಬಡಿದು ಆಯುಧಗಳಿಂದ ಕುಟುಂಬದವರನ್ನು ಬೆದರಿಸಿ ಅಪ್ರಾಪ್ತೆಯೋರ್ವಳನ್ನು ಅಪಹರಿಸಿಕೊಂಡು ಹೋದ ಬಗ್ಗೆ ಇಂದು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ! ಅತ್ತಿಗೇರಿ ಗ್ರಾಮದ ಅಬ್ದುಲ್ ಮುನಾಫ್, ಹುಸೇನಸಾಬ್, ನದಾಫ ಎಂಬ 26 ವರ್ಷದ ವ್ಯಕ್ತಿ ಕುಂದಗೋಳ ತಾಲೂಕಿನ ಕುಂಕೂರು ಗ್ರಾಮದ ಕುಟುಂಬದರ ಮನೆಗೆ ನುಗ್ಗಿ ಆಯುಧಗಳಿಂದ ಕುಟುಂಬದವರನ್ನು ಬೆದರಿಸಿ ಕಳೆದ ಬುಧವಾರದಂದು ರಾತ್ರಿ 2 ಗಂಟೆ 30 ನಿಮಿಷದ ಸಮಯದಲ್ಲಿ ಅಪ್ರಾಪ್ತೆಯೋರ್ವಳನ್ನು ಅಪಹರಿಸಿಕೊಂಡು ಹೋಗಿದ್ದಾನೆ.
ಈ ಪ್ರಕರಣದ ಬಗ್ಗೆ ಕುಟುಂಬಸ್ಥರು ವಿಶ್ವ ಹಿಂದೂ ಪರಿಷತ್ ಸಹಕಾರದಲ್ಲಿ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸತ್ಸಂಗ ಪ್ರಮುಖ ಗುರು ಪಾಟೀಲ್ ಲವ್ ಜಿಹಾದ್ ಶಂಕೆ ಇರಬಹುದು ಎಂದು ಪಬ್ಲಿಕ್ ನೆಕ್ಸ್ಟ್'ಗೆ ಮಾಹಿತಿ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕುಂದಗೋಳ ಗ್ರಾಮೀಣ ಪೊಲೀಸರು ತನಿಖೆ ನಡೆಸಿದ ಬಳಿಕವೇ ಪ್ರಕರಣದ ಸತ್ಯಾಂಶ ತಿಳಿಯಲಿದೆ.
Kshetra Samachara
17/01/2022 07:49 pm