ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಕೊಲೆ ಆರೋಪಿತರ ಬಂಧನ

ಧಾರವಾಡ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಬಳಿಯ ವನಹಳ್ಳಿ ರಸ್ತೆ ಬಳಿ ಈಚೆಗೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಭೀಮಸಿ ಅಲಿಯಾಸ್ ಭೀಮಪ್ಪ ಭಂಗಿ, ಶ್ರೀಶೈಲ ನರಗುಂದ, ರವಿ ಆರೆಣ್ಣವರ, ಮಂಜುನಾಥ ಮಟ್ಟಿ ಎಂಬುವವರೇ ಬಂಧಿತ ಆರೋಪಿಗಳು. ಸದ್ಯ ಇವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ವನಹಳ್ಳಿ ಗ್ರಾಮದ ರಸ್ತೆಯಲ್ಲಿ ಈ ನಾಲ್ವರೂ ಆರೋಪಿತರು ಶಿವಪ್ಪ ಆರೆಣ್ಣವರ ಎಂಬಾತನೊಂದಿಗೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ಯಾತೆ ತೆಗೆದಿದ್ದರು. ಜಗಳ ವಿಕೋಪಕ್ಕೆ ತಿರುಗಿ ಶಿವಪ್ಪನ ಕೊಲೆ ನಡೆದಿತ್ತು.

ಈ ಸಂಬಂಧ ಸಿದ್ಧಾರೂಢ ಆರೆಣ್ಣವರ ಎಂಬುವವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

15/01/2022 09:40 am

Cinque Terre

36.82 K

Cinque Terre

2

ಸಂಬಂಧಿತ ಸುದ್ದಿ