ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡೆಬಿಟ್ ಕಾರ್ಡ್ ನೆಪದಲ್ಲಿ ನಿವೃತ್ತ ನೌಕರರೊಬ್ಬರಿಗೆ 6,77,600 ರೂ. ವಂಚನೆ

ಹುಬ್ಬಳ್ಳಿ: ಡೆಬಿಟ್ ಕಾರ್ಡ್ ಸರಿಮಾಡುವ ನೆಪದಲ್ಲಿ ನಿವೃತ್ತ ನೌಕರರೊಬ್ಬರಿಗೆ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ವಿದ್ಯಾನಗರದ ಸಿ.ಎಸ್.ಜೋಶಿ ವಂಚನೆಗೆ ಒಳಗಾದವರಾಗಿದ್ದು, ಇವರಿಗೆ ಜ.7 ರಂದು ಅಪರಿಚಿತ ನಂಬರ್ ನಿಂದ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ ಸರಿ ಪಡಿಸಲು ಕಸ್ಟಮರ್ ಕೇರ್ ಗೆ ಸಂಪರ್ಕಿಸಿ ಎಂದು ಸಂದೇಶ ಬಂದಿದ್ದು, ಆ ಲಿಂಕ್ ನಂಬಿ ಒತ್ತಿದಾಗ ಅಪರಿಚಿತ ವ್ಯಕ್ತಿಯೋರ್ವ ಮಾತನಾಡಿ ತಾನು ಕಸ್ಟಮರ್ ಕೇರ್ ಸಿಬ್ಬಂದಿ ಎಂದು ನಂಬಿಸಿ ಬ್ಯಾಂಕ್ ಖಾತೆಯ ಮಾಹಿತಿ ಪಡೆದು 6,77,600 ರೂಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆಂದು ಸಿ.ಎಸ್.ಜೋಶಿ ಸೈಬರ್ ಕ್ರೈಂ ನಲ್ಲಿ ದೂರು ದಾಖಲಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/01/2022 08:56 pm

Cinque Terre

56.94 K

Cinque Terre

5

ಸಂಬಂಧಿತ ಸುದ್ದಿ