ಹುಬ್ಬಳ್ಳಿ: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನು ವರಿಸಿದ ಯುವತಿಗೆ ಹೆತ್ತವರಿಂದಲೇ ಕೊಲೆ ಬೆದರಿಕೆ ಬಂದಿದೆ. ಹೀಗಾಗಿ ನವ ದಂಪತಿ ಈಗ ರಕ್ಷಣೆಗಾಗಿ ಮಹಿಳಾ ಪೊಲೀಸರ ಮೊರೆ ಹೋಗಿದ್ದಾರೆ.
ಯೆಸ್...ಹುಬ್ಬಳ್ಳಿಯ ಗಂಗಾಧರ ನಗರದ ನಿವಾಸಿ ಮನು ಬಳ್ಳಾರಿ ಎಂಬ ಯುವತಿ ಹಾಗೂ ಗೋಕುಲ ರಸ್ತೆಯ ನಿವಾಸಿ ಮೌನೇಶ ಕಳೆದ 8 ತಿಂಗಳಿನಿಂದ ಪ್ರೀತಿಸುತ್ತಿದ್ದರು. ಜಾತಿ ಬೇರೆ ಎನ್ನುವ ಕಾರಣಕ್ಕೆ ಯುವತಿ ಮನು ಮನೆಯಲ್ಲಿ ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಪೋಷಕರ ವಿರೋಧವನ್ನು ಲೆಕ್ಕಿಸದೇ ಮನು ಜನವರಿ 7 ರಂದು ಧಾರವಾಡದ ಈರಣ್ಣ ದೇವಸ್ಥಾನದಲ್ಲಿ ಪ್ರಿಯತಮ ಮೌನೇಶ್ ಜೊತೆ ಮದುವೆ ಆಗಿದ್ದಾರೆ.
ಮದುವೆ ಸುದ್ದಿ ತಿಳಿದ ಯುವತಿ ಮನೆಯವರು, ಪತಿಯ ಫೋಟೋ ಇಟ್ಟುಕೊಂಡು ಹುಡುಕುತ್ತಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ನಮಗೆ ರಕ್ಷಣೆ ಇಲ್ಲವೆಂದು ಮನು ಗಂಡನ ಜೊತೆ ನಗರ ಮಹಿಳಾ ಪೊಲೀಸ್ ಕಚೇರಿಗೆ ತೆರಳಿ, ರಕ್ಷಣೆ ನೀಡುವಂತೆ ದೂರು ಕೊಟ್ಟಿದ್ದಾರೆ. ಮುಂದೆ ತಮಗೇನಾದರೂ ಅಪಾಯವಾದರೆ ತಮ್ಮ ಮನೆಯವರೇ ಕಾರಣ ಎಂದು ಆರೋಪಿಸಿದ್ದಾರೆ.
Kshetra Samachara
12/01/2022 04:35 pm