ಹುಬ್ಬಳ್ಳಿ: ನಮ್ಮ ಹುಬ್ಬಳ್ಳಿ ಒಳಗೆ ಯಾವುದನ್ನೂ ಯಾವುದಕ್ಕೆ ಬಳಕೆ ಮಾಡಬೇಕು ಎಂಬುವುದೇ ಗೊತ್ತಿಲ್ಲ ನೋಡ್ರಿ. ಜನರು ಸುರಕ್ಷಿತವಾಗಿ ಓಡಾಡಲು ಮೇಲು ಸೇತುವೆ ನಿರ್ಮಾಣ ಮಾಡಿದ್ದಾರೆ. ಆದರೆ ಈ ಮೇಲು ಸೇತುವೆ ಸುರಕ್ಷಿತ ಓಡಾಟಕ್ಕೆ ಅಲ್ಲ ಸುರಕ್ಷಿತ ಎಣ್ಣೆ ಹೊಡೆಯೋಕೆ ಉಪಯೋಗವಾಗಿದೆ.
ಹೌದು.. ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಪಾದಾಚಾರಿಗಳು ಟ್ರಾಫಿಕ್ ಸಮಸ್ಯೆಯಲ್ಲಿ ಸಿಲುಕಿಕೊಂಡು ಅಪಘಾತಕ್ಕೆ ತುತ್ತಾಗುವ ಸನ್ನಿವೇಶವನ್ನು ನಿಯಂತ್ರಣ ಮಾಡಲು ಈ ಮೇಲು ಸೇತುವೆ(ಸ್ಕೈ ವಾಕ್) ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿ ಜನರ ಓಡಾಟಕ್ಕಿಂತ ಮದ್ಯ ವ್ಯಸನದ ಅಡ್ಡೆಯಾಗಿ ಪರಿಣಮಿಸಿದೆ.
ಎಲ್ಲೆಂದರಲ್ಲಿ ಬಿದ್ದಿರುವ ಸರಾಯಿ ಪ್ಯಾಕ್, ಬಾಟಲಿಗಳಿಂದ ಮೇಲು ಸೇತುವ ಕುಡುಕರ ಅಡ್ಡೆಯಾಗಿದೆ. ಅಲ್ಲದೆ ಇಂತಹ ಅವ್ಯವಸ್ಥೆ ತಲೆದೋರಿದ ಹಿನ್ನಲೆಯಲ್ಲಿ ಜನರು ಓಡಾಡಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಇಷ್ಟು ದಿನ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಬರಿ ರೈಲ್ವೆ ನಿಲ್ದಾಣ ಮಾತ್ರವಾಗಿತ್ತು. ಈಗ ಸದ್ಗುರು ಸಿದ್ಧಾರೂಢರ ಹೆಸರನ್ನು ನಾಮಕರಣ ಮಾಡಿದ್ದು, ಇಂತಹ ಅವ್ಯವಸ್ಥೆಯಿಂದ ಸಿದ್ಧಾರೂಢರಿಗೆ ಅಗೌರವ ಸೂಚಿಸಿದಂತಾಗುತ್ತದೆ. ಕೂಡಲೇ ಸ್ಥಳೀಯ ಆಡಳಿತ ಮಂಡಳಿ ಎಚ್ಚೇತ್ತುಕೊಂಡು ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.
Kshetra Samachara
10/01/2022 12:27 pm