ಧಾರವಾಡ: ಸರ್‌ಲ್ಯಾಕ್ ಡಬ್ಬಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಸಾಗಿಸುತ್ತಿದ್ದ ಉಗಾಂಡಾ ದೇಶದ ಮಹಿಳೆಯನ್ನು ಭದ್ರತೆ ಮಧ್ಯೆ ನ್ಯಾಯಾಧೀಶರ ಮನೆಗೆ ಕರೆತರಲಾಗಿದೆ.
ದೆಹಲಿಯಿಂದ ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಈ ಉಗಾಂಡಾ ದೇಶದ ಮಹಿಳೆಯನ್ನು ಹುಬ್ಬಳ್ಳಿಯ ರೈಲ್ವೆ ಪೊಲೀಸರ ಸಹಕಾರದೊಂದಿಗೆ ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ಬಂಧಿಸಿದ್ದರು. ಹುಬ್ಬಳ್ಳಿಯಲ್ಲಿ ಬಂಧಿಸಲಾದ ಈ ಮಹಿಳೆಯನ್ನು ಭದ್ರತೆ ಮಧ್ಯೆ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನಿವಾಸದೆದುರು ಹಾಜರುಪಡಿಸಲಾಯಿತು.
ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನ್ನು ಉಗಾಂಡಾ ದೇಶದ ಮಹಿಳೆ ಅಕ್ರಮವಾಗಿ ಸಾಗಿಸುತ್ತಿದ್ದಳು. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಮಹಿಳೆ ಸೇರಿದಂತೆ ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನ್ನು ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/01/2022 05:05 pm