ಹುಬ್ಬಳ್ಳಿ: ಮಕ್ಕಳು ಲವ್ ಮಾಡಿದರೇ ಪಾಲಕರು ಮಕ್ಕಳಿಗೆ ಬುದ್ಧಿ ಹೇಳುವುದು ಕಾಮನ್. ಮಕ್ಕಳು ಮಾತು ಕೇಳಿಲ್ಲ ಅಂದರೆ ಪಾಲಕರು ಮಕ್ಕಳಿಗೆ ಶಿಕ್ಷೆ ಕೊಡುವುದು ಕೂಡ ಸಾಮಾನ್ಯ. ಆದರೆ ಇಲ್ಲೊಂದು ಲವ ಸ್ಟೋರಿ ಮಾತ್ರ ವಿಭಿನ್ನವಾಗಿದೆ. ಇಲ್ಲಿ ಮಕ್ಕಳ ಪ್ರೀತಿಗೆ ಪಾಲಕರು ಶಿಕ್ಷೆ ಅನುಭವಿಸುವಂತಾಗಿದೆ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...
ಹೀಗೆ ಹಾಸಿಗೆ ಹಿಡಿದು ಮಲಗಿರುವ ತಂದೆ. ಮಗನನ್ನು ಹಡೆದ ತಪ್ಪಿಗೆ ಕಣ್ಣೀರು ಹಾಕುತ್ತಿರುವ ತಾಯಿ ಇಂತಹದೊಂದು ಮನಕಲುಕುವ ಘಟನೆಗೆ ಸಾಕ್ಷಿಯಾಗಿದ್ದೇ ಹುಬ್ಬಳ್ಳಿಯ ನವನಗರದ ನಂದೀಶ್ವರ ಬಡಾವಣೆ. ಹೌದು.. ಮಗನ ಪ್ರೀತಿಗೆ ದುರುಳರು ಅಪ್ಪನಿಗೆ ಶಿಕ್ಷೆ ಕೊಟ್ಟಿದ್ದು, ಮಗನ ಪ್ರೀತಿಗೆ ತಂದೆಯ ಉಗುರುಗಳನ್ನು ಕಿತ್ತು ವಿಕೃತಿ ಮೆರೆದಿದ್ದಾರೆ. ಹುಬ್ಬಳ್ಳಿಯ ನವನಗರದ ನಂದೀಶ್ವರ ನಿವಾಸಿ ನೂರ ಅಹ್ಮದ ಬ್ಯಾಹಟ್ಟಿ ಎಂಬುವವರನ್ನು ಕಿಡ್ನಾಪ್ ಮಾಡಿ ಮನಬಂದಂತೆ ಹಲ್ಲೆ ನಡೆಸಿದ ದುಷ್ಟರು. ಮಗನ ಪ್ರೀತಿಗೆ ತಂದೆಯ ಮೇಲೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ. 53 ವರ್ಷದ ನೂರಅಹ್ಮದ್ ಬ್ಯಾಹಟ್ಟಿಯ ಎಂಬುವವರನ್ನು ಟಾಟಾ ಸುಮೋ ವಾಹನದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದು, ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ನೀಡಿದಂತಾಗಿದೆ.
ಇನ್ನೂ ನೂರಅಹ್ಮದ್ ಪುತ್ರ ಸುಬಾನಿ ಬ್ಯಾಹಟ್ಟಿ ಮತ್ತು ಆತಿಯಾ ಕಿತ್ತೂರು ನಡುವೆ ಪ್ರೇಮಾಂಕುರವಾಗಿತ್ತು. ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ ಸುಬಾನಿ ಮತ್ತು ಆತಿಯಾ. ಕಳೆದ ಡಿ. 29 ರಂದು ಮನೆ ಬಿಟ್ಟು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಯುವತಿಯರ ಮನೆಯವರಿಂದ ಯುವಕನ ತಂದೆಗೆ ಸಾಕಷ್ಟು ಬಾರಿ ಟಾರ್ಚರ್ ಮಾಡಿದ್ದು, ಹುಡುಗನ ತಂದೆಯನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾರೆ. ಟಾಟಾ ಸುಮೋದಲ್ಲಿ ಕಿಡ್ನಾಪ್ ಮಾಡಿ ಹುಬ್ಬಳ್ಳಿ ಹೊರಹೊಲಯದ ಪ್ರದೇಶದಲ್ಲಿ ಕಾಲಿನ ಉಗುರು ಕಿತ್ತು ಚಿತ್ರಹಿಂಸೆ. ನೀಡಿದ್ದಾರೆ. ಮದುವೆ ಮನೆಯಿಂದಲೇ ನೂರಅಹ್ಮದ್ ಸೇರಿ ಯುವಕನ ಕುಟುಂಬಸ್ಥರನ್ನು ಹುಡುಗಿಯ ಮನೆಯವರು ತಳಿಸಿದ್ದಾರೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಿತ್ರ ಹಿಂಸೆ ನೀಡಿದ್ದ 5 ಜನರ ಬಂಧನ ಮಾಡಲಾಗಿದೆ. ಇಬ್ರಾಹಿಂ ಖಾನ್ ಕಿತ್ತೂರ, ಇಲಿಯಾಸ್ ಕಿತ್ತೂರ, ಶಬ್ಬೀರ್ ಬೆಟಗೇರಿ, ಸಲ್ಮಾ ಕಿತ್ತೂರ, ಹೀನಾ ಕಿತ್ತೂರ ಬಂಧಿತರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/01/2022 07:52 pm