ಹುಬ್ಬಳ್ಳಿ; ಪಾಲಕರೇ ಎಚ್ಚರ...! ಶಾಲೆ ಕಾಲೇಜು ಓಪನ್ ಆಯ್ತು ನಮ್ಮ ಮಕ್ಕಳು ಶಾಲೆಗೆ ಹೋಗ್ತಾರೆ.. ಲಾಕ್ ಡೌನ್ ಆಯ್ತು ಮಕ್ಕಳು ಮನೆಯಲ್ಲಿ ಸೇಫ್ ಆಗಿ ಇರ್ತಾರೆ ಅಂದುಕೊಂಡಿದ್ದೀರಾ...? ಮಕ್ಕಳ ಬಗ್ಗೆ ನೀವೆಷ್ಟು ಕಾಳಜಿ ವಹಿಸಿದ್ದೀರಾ ಅದಕ್ಕಿಂತ ಹೆಚ್ಚಿನ ಕಾಳಜಿ ಇನ್ನುಮುಂದೆ ಮಕ್ಕಳ ಮೇಲೆ ಇರಬೇಕು.. ಅರೇ ಯಾಕೆ ಹೀಗೆ ಹೇಳ್ತಿದ್ದಾರೆ ಅಂದುಕೊಂಡ್ರಾ ಹಾಗಿದ್ದರೇ ಈ ಸ್ಟೋರಿ ನೋಡಿ...
ಬಾಲ್ಯದಲ್ಲಿ ಅಂಗಳದಲ್ಲಿ, ಅಂಗನವಾಡಿಯಲ್ಲಿ ಆಡುವ ಮಕ್ಕಳು ಈಗ ಹೇಳದೆ ಕೇಳದೆ ಮನೆಯಿಂದ ಎಸ್ಕೇಪ್ ಆಗುತ್ತಿದ್ದಾರೆ. ಸ್ವಲ್ಪ ಅಜಾಗರೂಕತೆಯಿಂದ ನಡೆದುಕೊಂಡರು ಮಕ್ಕಳು ಮಾತ್ರ ಹೇಳದೇ ಕೇಳದೇ ಮನೆಯಿಂದ ಹೋರ ಹೋಗುತ್ತಾರೆ. ಹೌದು.. ಮನೆಯ ನಿರ್ವಹಣೆ, ಮಾನಸಿಕ ಒತ್ತಡ, ಮನೆಯ ಕಿರುಕುಳಕ್ಕೆ ಬೇಸತ್ತ ಮಕ್ಕಳು ಹಾಗೂ ಪ್ರೇಮ ವ್ಯಾಮೋಹದಲ್ಲಿ ಮುಳುಗಿದ ಬಹುತೇಕ ಅಪ್ರಾಪ್ತ ಮಕ್ಕಳು ಮನೆಯಿಂದ ಹೊರ ನಡೆಯುತ್ತಿದ್ದಾರೆ. ಈಗಾಗಲೇ ಜನವರಿ 2021ರಿಂದ ಡಿಸೆಂಬರ್ ತಿಂಗಳ ವರೆಗೂ ಸುಮಾರು 484 ಮಕ್ಕಳು ಮನೆಯಿಂದ ಹೊರ ಹೋಗಿರುವ ಪ್ರಕರಣ ದಾಖಲಾಗಿದ್ದು, ಬಹುತೇಕ ಮಕ್ಕಳನ್ನು ರಕ್ಷಣೆ ಕೂಡ ಮಾಡಲಾಗಿದೆ.
ಈಗಾಗಲೇ ವಾರ್ಷಿಕ ವರದಿಯ ಪ್ರಕಾರ 484 ಜನ ಮಕ್ಕಳಲ್ಲಿ 78 ಹೆಣ್ಣು ಮಕ್ಕಳು, 406 ಗಂಡು ಮಕ್ಕಳು, ಪಾಲಕರ ಕಣ್ಣು ತಪ್ಪಿಸಿ ಮನೆಯಿಂದ ಹೋರ ಹೋಗಿರುವ ಬಗ್ಗೆ ವರದಿಯಾಗಿದೆ. ಇನ್ನೂ ಮಕ್ಕಳು ಮನೆಯಿಂದ ಓಡಿ ಬಂದು ಭಿಕ್ಷಾಟನೆ, ಬಾಲ ಕಾರ್ಮಿಕರಾಗಿ, ಅಲೆಮಾರಿಗಳಾಗಿ ತಿರುಗಾಟ ನಡೆಸಿದ್ದು, ಮಕ್ಕಳ ರಕ್ಷಣಾ ಕಾರ್ಯವನ್ನು ಮಕ್ಕಳ ಸಹಾಯವಾಣಿ ಮಾಡುತ್ತಿದೆ. ಒಟ್ಟು 80 ಜನ ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿದ್ದು, ಅನ್ಯ ರಾಜ್ಯದಿಂದಲೇ ಮಕ್ಕಳು ಹೆಚ್ಚು ತಪ್ಪಿಸಿಕೊಂಡು ಹೋಗಿರುವ ಅಂಶ ಬೆಳಕಿಗೆ ಬಂದಿದೆ. ಓಡಿಸ್ಸಾ ರಾಜ್ಯದಿಂದಲೇ ಬಹುತೇಕ ಮಕ್ಕಳು ಕೆಲಸದ ಕಾರಣದಿಂದ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರೆಲ್ಲರೂ ಮನೆಯಿಂದ ಓಡಿ ಬಂದು ಬಾಲ ಕಾರ್ಮಿಕರು ಆಗಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ.
ಒಟ್ಟಿನಲ್ಲಿ ಮಕ್ಕಳ ಮೇಲೆ ಪಾಲಕರ ಕೊಂಚ ನಿಷ್ಕಾಳಜಿ ಆದರೂ ಕೂಡ ಮಕ್ಕಳು ಬೇರೆ ಬೇರೆ ಹಾದಿಯನ್ನು ತುಳಿಯುವುದು ಖಂಡಿತ. ಕೂಡಲೇ ನಿಮ್ಮ ಮನೆಯ ಮಕ್ಕಳ ಬಗ್ಗೆ ಕಾಳಜಿ ವಹಿಸಿ..
-ಪಬ್ಲಿಕ್ ನೆಕ್ಸ್ಟ್ ವಿಶೇಷ ಮಲ್ಲೇಶ ಸೂರಣಗಿ
Kshetra Samachara
05/01/2022 02:17 pm