ಹುಬ್ಬಳ್ಳಿ: ಮನೆಗಳಲ್ಲಿ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ ಚಿನ್ನಾಭರಣ ಹಾಗೂ ಒಂದು ಆಟೋ ವಶಪಡಿಸಿಕೊಂಡಿದ್ದಾರೆ.
ಹೆಗ್ಗೇರಿಯ ಖಾಜಾಸಾಬ್ ಬಡಿಗೇರ, ಅಲ್ತಾಫ್ ಫಣಿಬಂಧ ಹಾಗೂ ಸೂಫಿಯಾನ ನದಾಫ್ ಬಂಧಿತ ಆರೋಪಿಗಳು. ಇವರು ಹಳೇ ಹುಬ್ಬಳ್ಳಿಯ ಶ್ರೀನಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಆರೋಪಿತರಿಂದ 2 ಲಕ್ಷ ರೂ. ಮೌಲ್ಯದ ಡೈಮಂಡ್ ಹರಳುಗಳಿದ್ದ ಕಿವಿಯೋಲೆ, 320 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಅಶೋಕ ಚವ್ಹಾಣ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪಿಎಸ್‌ಐ ಜಿ.ಎನ್. ಕಲ್ಯಾಣಿ, ಸಿಬ್ಬಂದಿ ಬಿ.ಡಿ. ಸಿಂಗನಹಳ್ಳಿ, ಎನ್.ಎಂ. ಪಾಟೀಲ, ಐ.ಎಸ್. ಸಂಶಿ, ಎನ್.ಎ. ಕೆಂಚಣ್ಣವರ, ಎಂ.ಬಿ. ಭಜಂತ್ರಿ, ಬಿ.ಎಂ. ಹೆದ್ದೇರಿ ತಂಡದಲ್ಲಿದ್ದರು.
Kshetra Samachara
05/01/2022 09:08 am