ಹುಬ್ಬಳ್ಳಿ: ಟಾಟಾ ಸುಮೋ ವಾಹನದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನ ಕಾಲಿನ ಉಗುರು ಕಿತ್ತು ಹಿಂಸೆ ನೀಡಿರುವ ಕುರಿತು ಎಪಿಎಂಸಿ ನವನಗರ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
ನವನಗರದ ನೂರ್ ಅಹಮ್ಮದ್ ಹಲ್ಲೆಗೀಡಾದವರು. ಹಳೇ ಹುಬ್ಬಳ್ಳಿಯ ಇಬ್ರಾಹಿಂ ಖಾನ್, ಇಲಿಯಾಸ್, ಶಬೀರ್, ಸಲ್ಮಾ, ಹೀನಾ ಹಲ್ಲೆ ನಡೆಸಿದ ಆರೋಪಿಗಳು. ಭೈರಿದೇವರಕೊಪ್ಪದಲ್ಲಿ ತಂಗಿಯ ಮಗಳ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ನೂರ್ ಅಹಮ್ಮದ್ ಪಾಲ್ಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿಗಳು ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ನಮ್ಮ ಮಗಳು ಮತ್ತು ನಿಮ್ಮ ಮಗ ಎಲ್ಲಿದ್ದಾನೆ ಹೇಳು' ಎಂದು ಹಲ್ಲೆ ನಡೆಸಿ, ಬಲಗಾಲಿನ ಹೆಬ್ಬೆರಳ ಉಗುರು ಕಿತ್ತು ಹಿಂಸಿಸಿದ್ದಾರೆ. ನಂತರ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
05/01/2022 08:22 am