ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೆತ್ತಗೆ ಮಾತಾಡಿ ಹಣ ವರ್ಗಾಯಿಸಿಕೊಂಡ ಫೇಸ್‌ಬುಕ್ ಗೆಳತಿ: ಬಣ್ಣದ ಮಾತಿಗೆ ಮರುಳಾದ ಗೆಳೆಯ

ಹುಬ್ಬಳ್ಳಿ: ಫೇಸ್‌ಬುಕ್‌ ಮೂಲಕ ನಗರದ ಯುವಕನೊಬ್ಬನನ್ನು ಪರಿಚಯಿಸಿಕೊಂಡ ಯುವತಿಯೊಬ್ಬಳು ಹುಬ್ಬಳ್ಳಿಯಲ್ಲಿ ಹೂಡಿಕೆ ಮಾಡಲೆಂದು ಅಮೆರಿಕದಿಂದ ಬರುತ್ತಿದ್ದೇನೆಂದು ನಂಬಿಸಿ 59,200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾಳೆ.

ಶಾಂತಿನಗರದ ನಿಖಿಲ್ ಶಾಹ ಅವರಿಗೆ ಅಶರ್ ಡಾಮಿನ್ ಎಂಬ ಯುವತಿ ಫೇಸ್‌ಬುಕ್ ರಿಕ್ವೆಸ್ಟ್ ಕಳುಹಿಸಿದ್ದಳು. ರಿಕ್ವೆಸ್ಟ್‌ಗೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು. ಬಳಿಕ ನಿಖಿಲ್ ಸ್ನೇಹ ಸಂಪಾದಿಸಿದ ಯುವತಿ ವಾಟ್ಸ್‌ಆ್ಯಪ್ ನಂಬರ್ ಪಡೆದಿದ್ದಳು. ತನ್ನ ಬಳಿ ಇರುವ ಯುಎಸ್ ಡಾಲರ್ ಅನ್ನು ಹುಬ್ಬಳ್ಳಿಯಲ್ಲಿ ಹೂಡಿಕೆ ಮಾಡಲು ಬರುತ್ತಿದ್ದೇನೆ ಎಂದು ನಂಬಿಸಿದ್ದಳು. ನನ್ನ ಬಳಿ ಯೆಲ್ಲೋ ಕಾರ್ಡ್ ಇಲ್ಲದ ಕಾರಣ ಹಾಗೂ ಯುಎಸ್ ಡಾಲರ್ ಇರುವ ಕಾರಣಕ್ಕೆ ದೆಹಲಿ ಏರ್‌ಪೋರ್ಟ್‌ನಲ್ಲಿ ಕಸ್ಟಡಿಗೆ ಹಾಕಿದ್ದಾರೆ. ಬಿಡಿಸಿಕೊಳ್ಳಲು ಮತ್ತು ಹುಬ್ಬಳ್ಳಿಗೆ ವಿಮಾನ ಟಿಕೆಟ್ ಮತ್ತಿತರ ನೆಪ ಹೇಳಿ ನಿಖಿಲ್ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾಳೆಂದು ಸೈಬರ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

04/01/2022 09:19 am

Cinque Terre

30.11 K

Cinque Terre

6

ಸಂಬಂಧಿತ ಸುದ್ದಿ