ಹುಬ್ಬಳ್ಳಿ: ಆತ ದೇಶಕ್ಕೆ ಅನ್ನ ಹಾಕುವ ರೈತರಿಗೆ ನೆರವಾಗಲು ಮುಂದಾಗಿದ್ದ. ರೈತರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಲು ಹೋಗಿ ಈಗ ಸಾವಿಗೆ ಶರಣಾಗಿದ್ದಾನೆ. ಬೇರೆಯವರ ಕಣ್ಣೀರು ಒರೆಸಲು ಹೋಗಿ ಕುಟುಂಬದವರ ಕಣ್ಣಲ್ಲಿ ನೀರು ಹಾಕಿಸಿದ ವ್ಯಾಪರಸ್ಥನ ಸ್ಟೋರಿ ತೋರಸ್ತೀವಿ ನೋಡಿ..
ಜೈ ಜವಾನ್ ಜೈ ಕಿಸಾನ್ ಎಂಬುವಂತ ಧೇಯವಾಕ್ಯದಲ್ಲಿ ಜೀವನ ನಡೆಸುತ್ತಿದ್ದ ಹುಬ್ಬಳ್ಳಿಯ ವ್ಯಾಪಾರಸ್ಥ ಸಾಲದ ಒತ್ತಡಕ್ಕೆ ಮಣಿದು ಜೀವವನ್ನೇ ಕಳೆದುಕೊಂಡಿದ್ದಾನೆ. ಹೌದು.. ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಅಂಗಡಿ ವ್ಯಾಪರಸ್ಥನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿಯ ನಿಲಿಜಿನ್ ರಸ್ತೆಯಲ್ಲಿನ ಮಧುರಾ ಚೈತನ್ಯ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಶ್ರೀ ಸಂಗಮನಾಥ ಅಗ್ರೋ ಸೆಲ್ಸ್ ಕಾರ್ಪೊರೇಷನ್ (ಸಿದ್ದಗಂಗಾ ಅಗ್ರೋ ಸೆಲ್ಸ್) ಮಾಲಿಕ ನಾಗನಗೌಡ ಪಾಟೀಲ್ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಹುಬ್ಬಳ್ಳಿಯ ಗೋಕುಲ ರಸ್ತೆಯ ಲಕ್ಷ್ಮೀ ನಗರದ ನಿವಾಸಿಯಾದ ಇವರು ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ವ್ಯವಸಾಯ ಮಾಡಲು ಸಾಲದ ರೂಪದಲ್ಲಿ ಬೀಜ ಗೊಬ್ಬರಗಳನ್ನು ನೀಡಿದ್ದರು. ಬೆಳೆ ಬಂದಾಗ ರೈತ ಕೊಡುತ್ತಾನೆ ಎಂದು ನಂಬಿಕೊಂಡಿದ್ದ ವ್ಯಾಪಾರಸ್ಥ ಈಗ ನೇಣಿನ ಕುಣಿಕೆಗೆ ಕೊರಳು ಒಡ್ಡಿದ್ದಾನೆ.
ಇನ್ನೂ ತಮ್ಮ ಅಂಗಡಿಯ ಅಕ್ಕ-ಪಕ್ಕದ ವ್ಯಾಪಸ್ಥರ ಜೊತೆಗೆ ಉತ್ತಮ ಭಾಂಧ್ಯವ್ಯ ಹೊಂದಿದ್ದ ನಾಗನಗೌಡ ರೈತರ ಜೊತೆಗೆ ಕೂಡ ಸಾಕಷ್ಟು ಅನ್ಯೋನ್ಯವಾಗಿದ್ದರು. ಆದರೆ ಬೇರೆಯವರಿಗೆ ನೆರವಾಗಲು ಹೋದ ವ್ಯಾಪಾರಸ್ಥ ನೇಣಿಗೆ ಶರಣಾಗಿದ್ದಾನೆ. ನಿನ್ನೆ ಮನೆಯಿಂದ ಅಂಗಡಿಗೆ ಹೋಗುತ್ತೇನೆ ಎಂದು ಹೋಗುವ ವೇಳೆ ಮಡದಿಯ ಸೀರೆಯೊಂದನ್ನು ತೆಗೆದುಕೊಂಡು ಹೊಗಿದ್ದ. ಸಾಲಬಾಧೆ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು,ಘಟನೆಯ ಮಾಹಿತಿ ಪಡೆದ ಉಪನಗರ ಪೊಲಿಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಂಗಡಿಯಲ್ಲಿನ ಕಾಂಪ್ಲೆಕ್ಸ್ ಗೆ ಅಳವಡಿಸಿದ ಸಿ ಸಿ ಕ್ಯಾಮರಾ ಗಳ ವೈಯರ್ ಗಳು ಮೂರ್ನಾಲ್ಕು ದಿನಗಳ ಹಿಂದೆಯೆ ಇಲಿ ಕಚ್ಚಿದ್ದರಿಂದ ಕೆಲಸ ಮಾಡುತ್ತಿಲ್ಲವೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಉಪಕಾರಿಯಾಗಿದ್ದ ನಾಗನಗೌಡನ ಸಾವು ನಿಜಕ್ಕೂ ಕುಟುಂಬದವರಿಗೆ ನುಂಗಲಾರದ ತುತ್ತಾಗಿದೆ.ಸುಸಜ್ಜಿತ ಕುಟುಂಬ ಹೊಂದಿದ್ದ ನಾಗನ ಗೌಡ ಪಾಟೀಲನ ಸಾವಿಗೆ ಕಾರಣ ಎನು ಎಂಬುದನ್ನು ಪೊಲಿಸರ ತನಿಖೆಯಿಂದಲೇ ಸತ್ಯಾಂಶ ಹೊರ ಬರಬೇಕಿದೆ.
Kshetra Samachara
03/01/2022 02:43 pm