ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಳ್ಳತನ ಪ್ರಕರಣ-ಬಂಗಾರ ಸಮೇತ ಆರೋಪಿಗಳ ಬಂಧನ

ಹುಬ್ಬಳ್ಳಿ:ನಗರದ ಬಸವನಗರದಲ್ಲಿ ಡಿ.14 ರಂದು ಬೀಗ ಹಾಕಿದ ಎರಡು ಪ್ರತ್ಯೇಕ ಮನೆಗಳನ್ನು ರಾತ್ರಿ ವೇಳೆ ಕೀಲಿ ಮುರಿದು, ಅಪಾರ ಪ್ರಮಾಣದ ಬಂಗಾರ ಬೆಳ್ಳಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿರುವ ಹಿನ್ನೆಲೆಯಲ್ಲಿ, ಕಳ್ಳರ ಮೇಲೆ ಕ್ರಮ ಜರುಗಿಸಲು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎ.ಜಿ.ಚವ್ಹಾಣ ಅವರ ತಂಡ ರಚನೆ ಮಾಡಿದ್ದರು.

ಇನ್ಸ್ಪೆಕ್ಟರ್ ನೇತೃತ್ವದ ತಂಡ ಮನೆಕಳ್ಳತನ ಮಾಡಿದ್ದ ಆರೋಪಿಗಳ ಸಮೇತ, 52-ಗ್ರಾಂ. ತೂಕದ ಬಂಗಾರದ ಆಭರಣಗಳು, 390-ಗ್ರಾಂ. ತೂಕದ ಬೆಳ್ಳಿ ಆಭರಣ ಹಾಗೂ ಇತರೆ ವಸ್ತುಗಳು ಸೇರಿ ಒಟ್ಟು 3,30,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದರಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ.

ಈ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಂಡಕ್ಕೆ ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Edited By :
Kshetra Samachara

Kshetra Samachara

24/12/2021 10:20 am

Cinque Terre

39.84 K

Cinque Terre

0

ಸಂಬಂಧಿತ ಸುದ್ದಿ