ಹುಬ್ಬಳ್ಳಿ: ಪ್ಲಾಟ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಬರೋಬ್ಬರಿ 51.88 ಲಕ್ಷ ರೂ.ಪಡೆದು ವಂಚನೆ ಮಾಡಿದ ಘಟನೆ, ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅವಿನಾಶ ಸವಣೂರ ಎಂಬಾತನೇ ವಂಚನೆ ಮಾಡಿದ ವ್ಯಕ್ತಿ ಎಂದು ದೂರಲಾಗಿದೆ. ಕುಸುಗಲ್ ರಸ್ತೆಯ ಹೇಮಂತನಗರ ಕ್ರಾಸ್‌ನಲ್ಲಿ ನಿರ್ಮಾಣ ಆಗಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಕೊಡುತ್ತೇನೆ ಎಂದು ಹಣ ಪಡೆದಿದ್ದರು. ಬಳಿಕ ಬುಕ್ಕಿಂಗ್ ಮಾಡಿದ್ದ ಫ್ಲಾಟ್‌ನ್ನು ಬೇರೊಬ್ಬರಿಗೆ ಲೀಜ್‌ಗೆ ನೀಡಿ ನಮಗೆ ನೋಂದಣಿ ಮಾಡಿಕೊಟ್ಟಿಲ್ಲ ಎಂದು ವಿಕ್ರಮ ಜೈನ್ ದೂರು ದಾಖಲಿಸಿದ್ದಾರೆ.
Kshetra Samachara
24/12/2021 09:41 am