ಹುಬ್ಬಳ್ಳಿ: ನಗರದ ಮಹಿಳೆಯೊಬ್ಬರಿಗೆ ಇಬ್ಬರು ಮಹಿಳೆಯರು, ಹಾಗೂ ಓರ್ವ ಸೇರಿ ಶೇರ್ ಮಾರ್ಕೆಟಿಂಗ್ ಟ್ರೇಡಿಂಗ್‌ಗೆ ಹಣ ಕೊಟ್ಟರೆ ದುಪ್ಪಟ್ಟು ಮಾಡಿಕೊಡುತ್ತೇವೆಂದು ನಂಬಿಸಿ, ಕಳೆದ ಎರಡು ವರ್ಷಗಳಿಂದ ಹಂತ ಹಂತವಾಗಿ 21 ಲಕ್ಷ ರೂ. ಇಸಿದುಕೊಂಡು ವಂಚಿಸಿರುವ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲು ಪರಿಚಿತಳಾದ ಅಕ್ಕಮ್ಮ ಎಂಬುವಳು ಬೆಳಗಾವಿಯ ಶಿವಪುತ್ರಯ್ಯನನ್ನು ಪರಿಚಯಿಸಿದ್ದಾಳೆ. ಆತ ನಿಮ್ಮ ಹಣವನ್ನು ಶೇರ್ ಮಾರ್ಕೆಟ್‌ಗೆ ಹಾಕಿದರೆ ದುಪ್ಪಟ್ಟು ಮಾಡಿ ಕೊಡುವೆ ಎಂದು ನಂಬಿಸಿ ತನ್ನ ಬ್ಯಾಂಕ್ ಖಾತೆಗೆ 3 ಲಕ್ಷ ರೂ. ಇಸಿದುಕೊಂಡಿದ್ದಾನೆ. ತದನಂತರ ಅಕ್ಕಮ್ಮಳ ಮೂಲಕಪರಿಚಿತಳಾದ ಜಾಹೀದಾ ಬೇಗಂ ಎಂಬುವಳು ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡುವುದಾಗಿ 18 ಲಕ್ಷರೂ , ಇಸಿದುಕೊಂಡಿದ್ದಾಳೆ.
ಮೂವರು ಸೇರಿ 21 ಲಕ್ಷ ರೂ. ಇಸಿದುಕೊಂಡು ವಾಪಸ್ ಕೊಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕೋಟಿಲಿಂಗನಗರದ ಸುಮಿತಾ ಎಂಬುವರು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.
Kshetra Samachara
19/12/2021 09:55 am