ಹುಬ್ಬಳ್ಳಿ: ಅನ್ಯ ಕೆಲಸದ ನಿಮಿತ್ತವಾಗಿ ಮನೆಗೆ ಬೀಗ ಹಾಕಿ ಹೋದ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿ ನಗ ನಾಣ್ಯ ಕದ್ದು ಪರಾರಿಯಾಗಿರುವ ಘಟನೆ ನಗರದ ಹಳೆ ಹುಬ್ಬಳ್ಳಿಯ ಬಸವನಗರದಲ್ಲಿ ನಡೆದಿದೆ.
ಎ.ಎನ್. ಪರಮೇಶ್ವರಪ್ಪ ಎಂಬುವವರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಇವರು ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದರು.
ಈ ವೇಳೆ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿದ್ದ 66 ಗ್ರಾಂ ತೂಕದ ಬಂಗಾರದ ಒಡವೆ, 3,700 ಗ್ರಾಂ ತೂಕದ ಬೆಳ್ಳಿ ವಸ್ತು, 31 ಸಾವಿರ ಮೌಲ್ಯದ ಇತರ ವಸ್ತುಗಳು ಹಾಗೂ 1 ಲಕ್ಷ ಮೌಲ್ಯದ ಎಲ್‌ಇಡಿ ಟಿವಿ, ಐ ಫೋನ್, ಐ ಪ್ಯಾಡ್ ಹಾಗೂ ಲ್ಯಾಪ್‌ಟಾಪ್ ಸೇರಿದಂತೆ ಒಟ್ಟು 5.54 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/12/2021 12:11 pm