ಧಾರವಾಡ: ಧಾರವಾಡದ ವಿಜಯಾನಂದನಗರ ಹಾಗೂ ಭಾವಿಕಟ್ಟಿ ಪ್ಲಾಟ್‌ನಲ್ಲಿ ಮೂರು ಮನೆಗಳಿಗೆ ಕನ್ನ ಹಾಕಿರುವ ಖದೀಮರು ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಭಾವಿಕಟ್ಟಿ ಪ್ಲಾಟ್‌ನ ಕಲ್ಲಪ್ಪ ಜೋಡಳ್ಳಿ, ವಿಜಯಾನಂದನಗರದ ನಿರ್ಮಲಾ ಬಂಕಾಪುರ ಹಾಗೂ ವೆಂಕಟೇಶ ಟಿಕಾನದಾರ ಎಂಬುವವರ ಮನೆಗೆ ಕನ್ನ ಹಾಕಿರುವ ಕಳ್ಳರು ಅಪಾರ ಪ್ರಮಾಣದ ಚಿನ್ನದ ವಸ್ತು ಹಾಗೂ ನಗದು ದೋಚಿಕೊಂಡು ಹೋಗಿದ್ದಾರೆ.
ಈ ಮೂರೂ ಮನೆಯವರು ಊರಿಗೆ ಹೋದ ಸಂದರ್ಭವನ್ನು ಬಳಕೆ ಮಾಡಿಕೊಂಡ ಕಳ್ಳರು, ಮನೆಯ ಕೀಲಿ ಒಡೆದು ಒಳನುಗ್ಗಿ ಕಲ್ಲಪ್ಪ ಜೋಡಳ್ಳಿ ಅವರ ಮನೆಯ ಅಲ್ಮೆರಾದಲ್ಲಿದ್ದ 10 ಗ್ರಾಂ ಚಿನ್ನದ ಸರ, 15 ಸಾವಿರ ನಗದು ಹಾಗೂ ನಿರ್ಮಲಾ ಬಂಕಾಪುರ ಅವರ ಮನೆಯಲ್ಲಿದ್ದ 40 ಗ್ರಾಂ ಚಿನ್ನದ ವಸ್ತು, 80 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಇನ್ನು ವೆಂಕಟೇಶ ಟಿಕಾನದಾರ ಅವರ ಮನೆಯಲ್ಲೂ ಕಳ್ಲತನ ಎಸಗಿರುವ ಖದೀಮರು ಅವರ ಮನೆಯಲ್ಲೂ ಕಳ್ಳತನ ಎಸಗಿದ್ದಾರೆ.
ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರೂ ಭೇಟಿ ನೀಡಿದ್ದಾರೆ.
Kshetra Samachara
16/12/2021 01:35 pm