ಹುಬ್ಬಳ್ಳಿ: ವ್ಯಕ್ತಿಯೊಬ್ಬ ಕೈಯಲ್ಲಿ ಕಲ್ಲು ಹಿಡಿದುಕೊಂಡು ನನಗೆ ನ್ಯಾಯ ಕೊಡಿಸಿ ಎಂದು ಬಸ್, ಆಟೋ, ಬೈಕ್‌ಗಳನ್ನು ತಡೆಗಟ್ಟಿ ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದ್ದಾನೆ. ಈ ಘಟನೆ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.
ತಲೆಯಲ್ಲಿ ರಕ್ತ ಸೋರುತ್ತಿದ್ದ ವ್ಯಕ್ತಿಯೊಬ್ಬ, ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಬಾರ್ ಮಾಲೀಕರ ಜೊತೆ ಕ್ಯಾತೆ ತೆಗೆದಿದ್ದಲ್ಲದೇ, ಬಾರ್ ಮಾಲೀಕರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ನಡು ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿ ಎನ್ನುತ್ತ ಹುಚ್ಚಾಟ ತೋರಿದ್ದಾನೆ.
ನಂತರ ಸಾರ್ವಜನಿಕರು ಈತನ ಉಪಟಳ ತಾಳದೇ ಗದರಿಸಿದ್ದಾರೆ. ಇದಕ್ಕೆ ಆತ ನನ್ನವರನ್ನು ಕರೆದುಕೊಂಡು ಬರ್ತೀನಿ ಎಂದು ಕೂಗಾಡುತ್ತ ಅಲ್ಲಿಂದ ಕಾಲ್ಕಿತ್ತಿದ್ದಾನೆ.
Kshetra Samachara
16/12/2021 11:08 am