ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಳಿತಲ್ಲೇ ಜನರ ಜೇಬಿಗೆ ಕನ್ನ ಹಾಕುತ್ತಿರೋ ಗ್ಯಾಂಗ್ಸ್- ಇದಕ್ಕೆ ಅಂತ್ಯ ಇಲ್ಲವೇ?

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆ ಕ್ರೈಮ್‌ಗಳು ಕೂಡ ಹೆಚ್ಚಾಗುತ್ತಿವೆ. ಕಣ್ಣಿಗೆ ಕಾಣುವ ಕಳ್ಳರಿಗಿಂತ ಇವರು ಮೋಸ್ಟ್ ಡೆಂಜ್ಯುರಸ್ ಆಗಿದ್ದಾರೆ. ಎಲ್ಲೋ ಕುಳಿತುಕೊಂಡು ಜನರನ್ನು ನಂಬಿಸಿ ಹಣವನ್ನು ಪೀಕುತ್ತಿದ್ದಾರೆ. ಅಷ್ಟಕ್ಕೂ ಅವರು ಯಾರು ಅಂತಿರಾ ಈ ಸ್ಟೋರಿ ನೋಡಿ.

ಹೌದು. ವಾಣಿಜ್ಯ ನಗರಿ ಮತ್ತು ಪೇಡಾ ನಗರಿ ಸದ್ಯ ವೇಗವಾಗಿ ಬೆಳೆಯುತ್ತಿರುವ ನಗರಗಳು. ಇತ್ತ ಕ್ರೈಮ್‌ಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಅಭಿವೃದ್ಧಿ ಕಾಣುತ್ತಿರುವ ನಗರಗಳು ಕ್ರೈಮ್ ನಗರಗಳಾದವಾ? ಅನ್ನೋ ಅನುಮಾನ ಶುರುವಾಗಿದೆ. ಯಾಕೆಂದರೆ 2018ರಿಂದ ಇಲ್ಲಿಯವರೆಗೆ ಸೈಬರ್ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗಿವೆ. 2018ರಲ್ಲಿ 17 ಪ್ರಕರಣ, 2019ರಲ್ಲಿ 110 ಪ್ರಕರಣ, 2020ರಲ್ಲಿ 118 ಪ್ರಕರಣ, 2021ರಲ್ಲಿ 161 ಪ್ರಕರಣ ದಾಖಲಾಗಿವೆ.

ಉಡುಗೊರೆ, ವಿದೇಶಿ ಪ್ರಯಾಣ, ಲಕ್ಕಿ ಡ್ರಾ ಜೊತೆಗೆ ಫೇಸ್‌ಬುಕ್‌ನಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿ ವಂಚನೆ ಮಾಡುತ್ತಿದ್ದಾರೆ ಖದೀಮರು. ಈಗಾಗಲೇ ಫೋನ್ ಪೇ, ಗೂಗಲ್ ಪೇನಲ್ಲಿ ಕ್ಯಾಶ್ ಬ್ಯಾಕ್ ಬಂದಿದೆ ಎಂದು ನೂರಾರು ಜನರಿಗೆ ನಿರಂತರ ವಂಚನೆ ಮಾಡುತ್ತಿದ್ದಾರೆ. ಪೊಲೀಸರು ಕೇಸ್ ದಾಖಲಿಸಿ ತನಿಖೆ ಶುರು ಮಾಡಿದರೂ ಅಂತ್ಯವಾಗದ ಸೈಬರ್ ಪ್ರಕರಣಗಳು, ಕುಳಿತಲ್ಲೇ ಜನರ ಜೇಬಿಗೆ ಕನ್ನ ಹಾಕುತ್ತಿರೋ ಗ್ಯಾಂಗ್ಸ್‌ಗಳಿಗೆ ಅಂತ್ಯ ಯಾವಾಗ ಎಂಬುದು ತಿಳಿಯದಂತಾಗಿದೆ.

Edited By : Vijay Kumar
Kshetra Samachara

Kshetra Samachara

15/12/2021 05:56 pm

Cinque Terre

20.31 K

Cinque Terre

1

ಸಂಬಂಧಿತ ಸುದ್ದಿ