ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೊಲೀಸರಿಗೆ ಹೆದರಿ ಕೈ ಕೊಯ್ದುಕೊಂಡ ಯುವಕ

ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡು ಗಲಾಟೆ ಮಾಡಿದವರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಮನು ಅಲಿಯಾಸ್ ಮನ್ಮಥ ಕೊರವರ ಎಂಬಾತನೂ ಆ ಗಲಾಟೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ಆತನನ್ನೂ ಕರೆತಂದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ಈ ವಿಚಾರಣೆಯಿಂದ ಮನು ತನ್ನ ಕೈಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಅಸಮಾಧಾನ ಹೊರಹಾಕಿದ್ದಾನೆ.

ನಾನು ಆ ಘಟನೆಯಲ್ಲಿ ಭಾಗಿ ಆಗೇ ಇಲ್ಲ. ಯಾರೋ ನನ್ನ ಹೆಸರು ಹೇಳಿದ್ದಾರೆಂದು ಪೊಲೀಸರು ನನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ನಾವು ಬದುಕಬೇಕೋ ಬೇಡವೋ? ಸಾಯಿ ಎಂದರೆ ಸತ್ತುಬಿಡುತ್ತೇವೆ. ಈ ರೀತಿ ಕಿರುಕುಳ ಕೊಡಬೇಡಿ ಎಂದು ಮನು ಅಳಲು ತೋಡಿಕೊಂಡಿದ್ದಾನೆ.

Edited By : Manjunath H D
Kshetra Samachara

Kshetra Samachara

05/12/2021 11:36 am

Cinque Terre

86.36 K

Cinque Terre

5

ಸಂಬಂಧಿತ ಸುದ್ದಿ