ಧಾರವಾಡ: ಮೀಟರ್ ಬಡ್ಡಿ ಕಿರುಕುಳ ತಾಳಲಾರದೇ ಸಾಲಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಸಂಪಿಗೆನಗರದಲ್ಲಿ ನಡೆದಿದೆ.
ವಿಜಯ ಅಣ್ಣಪ್ಪ ನಾಗನೂರ ಎಂಬಾತೇ (39) ಆತ್ಮಹತ್ಯೆ ಮಾಡಿಕೊಂಡವನು. ಈತ ಲಕ್ಷ್ಮೀಸಿಂಗನಕೇರಿಯ ಶಿವರಾಜ ಮಾಕಡವಾಲೆ ಎಂಬುವರಿಂದ 25 ಸಾವಿರ ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಡೆದಿದ್ದ. ನಂತರ ವಿಜಯ 50 ಸಾವಿರಕ್ಕೂ ಹೆಚ್ಚು ಹಣವನ್ನು ಮಾಕಡವಾಲೆಗೆ ಮರಳಿ ಕೊಟ್ಡಿದ್ದನು.
ಆದರೂ ಸಾಲ ತೀರಿಲ್ಲ ಎಂದು ಮಾಕಡವಾಲೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತು ವಿಜಯ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಧಿಕೃತವಾಗಿ ಬಡ್ಡಿ ರೂಪದಲ್ಲಿ ಹಣ ಕೊಟ್ಟು ಕಿರುಕುಳ ನೀಡಿದ ಆರೋಪದ ಮೇಲೆ ಉಪನಗರ ಠಾಣೆ ಪೊಲೀಸರು ಶಿವರಾಜ ಮಾಕಡವಾಲೆಯನ್ನು ಬಂಧಿಸಿದ್ದಾರೆ.
Kshetra Samachara
29/11/2021 08:31 pm