ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮದ ಗಂಗಾಧರ ನಗರದಲ್ಲಿ ಕಳ್ಳರು ನಸುಕಿನ ಜಾವ ಮನೆಯೊಂದರ ಕೀಲಿ ಮುರಿದು 53,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ 30,000 ರೂ. ನಗದು ಕದ್ದು ಪರಾರಿಯಾಗಿದ್ದಾರೆ.
ಲೋಹಿತ ಗುರುಸಂಗಪ್ಪ ಹೂಗಾರ ಮನೆಗೆ ಕೀಲಿ ಹಾಕಿಕೊಂಡು ಕೆಲಸದ ನಿಮಿತ್ತ ಬೇರೆಡೆ ತೆರಳಿದ್ದರು. ಈ ವೇಳೆ ಕೀಲಿ ಮುರಿದು ಮನೆಯಲ್ಲಿದ್ದ ಟ್ರಜರಿಯಲ್ಲಿದ್ದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ. 35,000 ರೂ. ಮೌಲ್ಯದ 10 ಗ್ರಾಂ ಚಿನ್ನದ ಚೈನ್, 18,000 ರೂ. ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ 30,000 ರೂ. ನಗದು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
26/11/2021 08:45 am