ಹುಬ್ಬಳ್ಳಿ: ನಗರದ ಮಣಪುರಂ ಗೋಲ್ಡ್‌ನಲ್ಲಿ 43 ಗ್ರಾಂ ಚಿನ್ನದ ಲೇಪನ ಇರುವ ನಕಲಿ ಚಿನ್ನವನ್ನು ಅಡ ಇಟ್ಟು ಸಾಲ ಪಡೆದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕುಲ ರಸ್ತೆಯ ನಾರಾಯಣ ಹುಬ್ಬಿಕರ ಎಂಬುವರು ಸೆಪ್ಟೆಂಬರ್ 2ರಿಂದ 7ರ ನಡುವಿನ ಅವಧಿಯಲ್ಲಿ ಚಿನ್ನದ ಲೇಪನ ಇರುವ ನಕಲಿ ಚಿನ್ನವನ್ನು ಅಡ ಇಟ್ಟು ಸಾಲ ಪಡೆದಿದ್ದರು. ಮೇಲಧಿಕಾರಿಗಳು ಪರಿವೀಕ್ಷಣೆಗೆ ಬಂದಾಗ ನಕಲಿ ಚಿನ್ನ ಎಂಬುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
24/11/2021 01:56 pm