ಹುಬ್ಬಳ್ಳಿ: ಅಪರಿಚಿತ ವ್ಯಕ್ತಿ ಇಂಡಿಯನ್ ಆರ್ಮಿ ಹೆಸರಲ್ಲಿ ನಗರದ ವೈದ್ಯರೊಬ್ಬರಿಗೆ ಕರೆ ಮಾಡಿ 'ನಮ್ಮ ಸಹೋದ್ಯೋಗಿಯೊಬ್ಬರನ್ನು ನಿಮ್ಮ ಆಸ್ಪತ್ರೆಗೆ ದಾಖಲಿಸುತ್ತೇವೆ. ಅವರ ಚಿಕಿತ್ಸಾ ವೆಚ್ಚವನ್ನು ಆರ್ಮಿ ಬ್ಯಾಂಕ್ ಖಾತೆಯಿಂದ ಮುಂಗಡವಾಗಿ ಪಾವತಿಸುತ್ತೇವೆ' ಎಂದು ನಂಬಿಸಿ ಪೇಟಿಎಂ ಮೂಲಕ 2,37,004 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ನ. 15ರಂದು ರಾತ್ರಿ ನಗರದ ವೈದ್ಯರೊಬ್ಬರಿಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. ತಾನು ಇಂಡಿಯನ್ ಆರ್ಮಿ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಸಹೋದ್ಯೋಗಿಯೊಬ್ಬರನ್ನು ನಿಮ್ಮ ಆಸ್ಪತ್ರೆಗೆ ದಾಖಲಿಸುತ್ತೇವೆ. ಅವರ ಚಿಕಿತ್ಸಾ ವೆಚ್ಚವನ್ನು ಮುಂಚಿತವಾಗಿ ಆರ್ಮಿ ಬ್ಯಾಂಕ್‌ನಿಂದ ಪಾವತಿಸುತ್ತೇವೆ ಎಂದು ನಂಬಿಸಿದ್ದ. ಬಳಿಕ ವೈದ್ಯರ ಪುತ್ರಿ ಹಾಗೂ ಅಳಿಯನ ಪೇಟಿಎಂ ನಂಬರ್ ಪಡೆದು ಹಣದ ರಿಕ್ವೆಸ್ಟ್ ಕಳುಹಿಸಿದ್ದ. ಅದಕ್ಕೆ ಯುಪಿಐ ಪಿನ್ ಹಾಕುವಂತೆ ಪುಸಲಾಯಿಸಿದ್ದ. ಬಳಿಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಕುರಿತು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/11/2021 11:21 am