ಹುಬ್ಬಳ್ಳಿ: ಪೊಲೀಸ್ ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ಕಸಬಾಪೇಟ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಶ್ರೀಕಾಂತ ಗೋಣೆಪ್ಪನವರ ಅಮಾನತಾಗಿದ್ದಾರೆ.
ಶಿಸ್ತಿನ ಇಲಾಖೆಯಲ್ಲಿ ಶ್ರೀಕಾಂತ ಅಶಿಸ್ತಿನಿಂದ ವರ್ತಿಸುತ್ತಿದ್ದರು. ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಎದುರು ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ಹೀಗೆ ಮಾಡದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ದುರ್ವತ್ರನೆ ಮುಂದುವರಿಸಿದ್ದರು. ಈ ಕಾರಣಕ್ಕೆ ಡಿಸಿಪಿ ಕೆ. ರಾಮರಾಜನ್ ವರ್ಗಾವಣೆಗೂ ಮುನ್ನವೇ ಶ್ರೀಕಾಂತ ಅಮಾನತು ಆದೇಶ ಹೊರಡಿಸಿದ್ದಾರೆ.
Kshetra Samachara
20/11/2021 11:17 am