ಹುಬ್ಬಳ್ಳಿ: ಇಲ್ಲಿನ ಇಬ್ರಾಹಿಂಪುರ ಖಾಜಾಬಾವಿ ಬಳಿ ಆಟೋದಲ್ಲಿ ಮಾರಕಾಸ್ತ್ರ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈಶ್ವರ ನಗರದ ಫಯಾಜ್ ಮುಜಾಹಿದ್ ಬಂಧಿತ ಆರೋಪಿ. ಪೊಲೀಸರು ಆರೋಪಿಯಿಂದ ಎರಡು ತಲ್ವಾರ್, ಆಟೋ ವಶಪಡಿಸಿಕೊಂಡಿದ್ದಾರೆ. ಯಾವುದೋ ಉದ್ದೇಶಕ್ಕಾಗಿ ಅಬ್ಬಾಸ್, ಸಮೀರ್ ಹಾಗೂ ಶಾನವಾಜ್ ಜತೆ ಫಯಾಜ್ ಆಟೋ ತೆಗೆದುಕೊಂಡು ಬಂದಿದ್ದ. ಗಸ್ತಿನಲ್ಲಿದ್ದ ಕಸಬಾಪೇಟ ಠಾಣೆ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆಟೋ ಬಿಟ್ಟು ಓಡಿದ್ದಾರೆ. ಈ ವೇಳೆ ಫಯಾಜ್‌ನನ್ನು ಬಂಧಿಸಿದ ಪೊಲೀಸರು ಆಟೋ ವಶಕ್ಕೆ ಪಡೆದರು. ಉಳಿದ ಮೂವರು ಪರಾರಿಯಾಗಿದ್ದಾರೆ.
Kshetra Samachara
19/11/2021 08:44 am