ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾರ್ವಜನಿಕರೇ ಎಚ್ಚರ.!- ಉದ್ಯೋಗ ಹುಡುಕಾಟದಲ್ಲಿದ್ದ ವ್ಯಕ್ತಿಗೆ ವಂಚನೆ

ಹುಬ್ಬಳ್ಳಿ: ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಅವರ ಬ್ಯಾಂಕ್ ಖಾತೆಯಿಂದ 1,99,998 ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.

ಹಳೇ ಹುಬ್ಬಳ್ಳಿಯ ಎ.ಬಿ. ಯಾದವಾಡ (42) ವಂಚನೆಗೆ ಒಳಗಾದವರು. ಇವರು ನೌಕರಿ ಗಿಟ್ಟಿಸಲು ಹಲವು ವೆಬ್‌ಸೈಟ್‌ಗಳಲ್ಲಿ ಹೆಸರು ನೋಂದಾಯಿಸಿದ್ದರು. ನ. 12ರಂದು ಆದಿತ್ಯ ಶರ್ಮಾ ಎಂದು ಹೆಸರು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೋರ್ವ, ಯಾದವಾಡ ಅವರ ಮೊಬೈಲ್‌ ಸಂಖ್ಯೆಗೆ ಸಂದೇಶ ಕಳುಹಿಸಿ ಅದನ್ನು ಓಪನ್ ಮಾಡಿ 10 ರೂ. ಹಣ ತುಂಬಿ ಎಲ್ಲ ವಿವರಗಳನ್ನು ದಾಖಲಿಸಿ ಎಂದು ಸೂಚಿಸಿದ್ದರು. ಅದರಂತ ಯಾದವಾಡ ಅವರು ಮಾಡಿದಾಗ ಅವರ ಖಾತೆಯಿಂದ ರೂ.99,998 ಕಡಿತವಾಗಿದೆ.

ಬಳಿಕ ಯಾದವಾಡ ಅವರು ತಮ್ಮ ಖಾತೆಯಿಂದ ಹಣ ಕಡಿತವಾಗಿರುವ ಕುರಿತು ದೂರಿದಾಗ ಅದಿತ್ಯ ಶರ್ಮಾ, ನಿಮ್ಮ ಹಣ ಖಾತೆಗೆ ಮರಳಿ ಬರುತ್ತದೆ. ಎಂದು ಹೇಳಿ ಇನ್ನೊಂದು ಮೊಬೈಲ್ ನಂಬರ್‌ಗೆ ಕರೆ ಮಾಡುವಂತೆ ಸೂಚಿಸುತ್ತಾರೆ. ಅದರಂತೆ ಯಾದವಾಡ ಅವರು ಇನ್ನೊಂದು ನಂಬರ್‌ಗೆ ಕರೆ ಮಾಡಿ ಅವರ ಸೂಚನೆಗಳನ್ನು ಪಾಲಿಸಿದಾಗ ಮತ್ತೆ ಅವರ ಬ್ಯಾಂಕ್ ಖಾತೆಯಿಂದ 99,999 ರೂ. ಹಣ ವರ್ಗಾವಣೆಯಾಗಿದೆ.

ಬಳಿಕ ಯಾದವಾಡ ಅವರು ಮತ್ತೆ ಆ ನಂಬರ್‌ಗೆ ಕರೆ ಮಾಡಿದರೆ ವಂಚಕರು ಫೋಸ್ ರಿವೀವ್ ಮಾಡಲಿಲ್ಲ. ಇದರಿಂದಾಗಿ ತಾವು ವಂಚನೆಗೆ ಒಳಗಾಗಿದ್ದು ತಿಳಿಸಿದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಈ ಕುರಿತು ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

16/11/2021 09:48 am

Cinque Terre

22.43 K

Cinque Terre

1

ಸಂಬಂಧಿತ ಸುದ್ದಿ