ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹತ್ತು ಜನರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರ ವಿಶಾಲ್ ಮೆಗಾ ಮಾರ್ಟ್ ಬಳಿ ನಡೆದಿದೆ.
ವಿಶಾಲ್ ಮೆಗಾ ಮಾರ್ಟ್ ಮ್ಯಾನೇಜರ್ ಯುವರಾಜ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಬಸವರಾಜ ಹಾಗೂ 10 ಜನರ ಸಂಗಡಿಗರಿಂದ ಹಲ್ಲೆ ಮಾಡಿರುವುದಾಗಿ ಹಲ್ಲೆಗೆ ಒಳಗಾದ ವ್ಯಕ್ತಿಯೇ ಮಾಹಿತಿ ನೀಡಿದ್ದಾರೆ. ಅಲ್ಲದೇ ಒಂದು ಬಂಗಾರದ ಚೈನ್, 30ಸಾವಿರ ನಗದು, ಮೊಬೈಲ್ ದರೋಡೆ ಮಾಡಿರುವುದಾಗಿ ಯುವರಾಜ ತಿಳಿಸಿದ್ದಾರೆ.
ಇನ್ನೂ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
13/11/2021 10:33 pm