ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭಾವಿ ಪತಿ ಕಿರುಕುಳದಿಂದ ಮನನೊಂದು ಪತ್ನಿ ಆತ್ಮಹತ್ಯೆ

ಹುಬ್ಬಳ್ಳಿ: ಭಾವಿ ಪತಿಯ ಕಿರುಕುಳಕ್ಕೆ ಮನನೊಂದು ಯುವತಿಯೊರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ಅಶೋಕ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿಯ ನಿವಾಸಿ ಪವಿತ್ರಾ ಎಂಬುವಳು ಸೆಪ್ಟೆಂಬರ್.1ರಂದು ಹಾವೇರಿಯ ಅಭಿನಂದನ್ ಎಂಬ ಯುವಕನ ಜೊತೆ ಎಂಗೇಜ್ಮೆಂಟ್ ಆಗಿತ್ತು‌, ಎಂಗೇಜ್ಮೆಂಟ್ ಆದಾಗಿನಿಂದಲೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದ್ರಿಂದ ಮನನೊಂದು ಪವಿತ್ರಾ ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನೂ ಕಳೆದ ವಾರ ದಾಂಡೇಲಿಯಲ್ಲಿ ಫ್ರಿ ವೆಡ್ಡಿಂಗ್ ಶೂಟಿಂಗ್ ಕರೆದುಕೊಂಡು ಹೋಗಿದ್ದ ಅಭಿನಂದನ್, ಅಲ್ಲಿಂದ ಬಂದ ನಂತರ ವಿಪರಿತ ಕಿರುಕುಳ ನೀಡಿದ್ದರಿಂದ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಎಂದು ಅಭಿನಂದನ್ ಮೇಲೆ ಆರೋಪ ಕೇಳಿ ಬಂದಿದ್ದು, ಅಭಿನಂದನ್ ವಿರುದ್ಧ,ಹುಬ್ಬಳ್ಳಿಯ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
Kshetra Samachara

Kshetra Samachara

13/11/2021 04:41 pm

Cinque Terre

34.25 K

Cinque Terre

6

ಸಂಬಂಧಿತ ಸುದ್ದಿ