ಹುಬ್ಬಳ್ಳಿ: ಲೋನ್ ಬೇಕು ಎಂದು ಕರೆ ಮಾಡಿದ ವ್ಯಕ್ತಿಯೊಬ್ಬರಿಂದ ಬ್ಯಾಂಕ್ ಖಾತೆ, ಎಟಿಎಂ ಮತ್ತಿತರ ವಿವರ ಪಡೆದು ಅವರ ಖಾತೆಯಿಂದಲೇ 1,50,000 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ ಜೈಭೀಮಾ ನಗರದ ಕೃಷ್ಣ ಕಟ್ಟಿಮನಿ ವಂಚನೆಗೀಡಾದವರು. ಆನ್ ಲೈನ್ ಬ್ಯಾಂಕಿಂಗ್‌ನಲ್ಲಿ ಲೋನ್ ಪಡೆಯಲೆಂದು ಗೂಗಲ್‌ನಲ್ಲಿ ಸರ್ಚ್ ಮಾಡಿ ಮೊ.ಸಂ. 93392 52032ಗೆ ಕರೆ ಮಾಡಿ ವಿಚಾರಿಸಿದ್ದರು. ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವಿಳಾಸದ ದಾಖಲೆ, ಬ್ಯಾಂಕ್, ಎಟಿಎಂ ಮತ್ತಿತರ ಮಾಹಿತಿ ಪಡೆದಿದ್ದ. ಬಳಿಕ ವಾಟ್ಸ್ ಆ್ಯಪ್ ನಂಬರ್ ಪಡೆದು ಎರಡು ಲಿಂಕ್ ಕಳುಹಿಸಿ, ಅದರಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದ. ನಿಮ್ಮ ಇಂಟರ್‌ನೆಟ್ ನಿಧಾನವಾಗಿದೆ. ನನ್ನ ನಂಬರ್‌ನಿಂದ ಅರ್ಜಿ ಸಲ್ಲಿಸುತ್ತೇನೆ ಎಂದು ಮತ್ತೊಂದು ಲಿಂಕ್ ಕಳುಹಿಸಿದ್ದ. ನಂತರ ವಿವಿಧ ಶುಲ್ಕದ ನೆಪ ಹೇಳಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
Kshetra Samachara
12/11/2021 09:12 am