ಹುಬ್ಬಳ್ಳಿ: ನೆಕ್ಸ್ ಕಾಯಿನ್ ವಂಚನೆ ಪ್ರಕರಣ ಕೊನೆಗೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ನೆಕ್ಸ್ ಕಾಯಿನ್ ಇನ್‌ವೆಸ್ಟಮೆಂಟ್ ಹೆಸರಲ್ಲಿ ನಡೆದ ವಂಚನೆ ಪ್ರಕರಣದ ಕುರಿತು ಪಬ್ಲಿಕ್ ನೆಕ್ಸ್ಟ್ ನಿನ್ನೆಯಷ್ಟೇ ವರದಿ ಬಿತ್ತರಿಸಿತ್ತು. ವರದಿಯಿಂದ ಎಚ್ಚೇತ್ತುಕೊಂಡ ಪೊಲೀಸ್ ಇಲಾಖೆಯು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೌದು.. ಪಬ್ಲಿಕ್ ನೆಕ್ಷ್ಟ್ ವರದಿ ಬೆನ್ನಲ್ಲಿ ಹುಬ್ಬಳ್ಳಿ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆಯನ್ನು ಸಹ ಕೈಗೊಂಡಿದ್ದಾರೆ. ಅಲ್ಲದೇ ಹುಬ್ಬಳ್ಳಿಯ ವಿದ್ಯಾನಗರದ ಪಿ.ಎಸ್. ಲಕಮನಹಳ್ಳಿ ಎಂಬುವವರು ವಂಚನೆಗೆ ಒಳಗಾದವರು. ವಂಚಕರು ಇವರನ್ನು ವಾಟ್ಸ್ ಆಪ್ ಗ್ರೂಪ್‌ಗೆ ಸೇರ್ಪಡೆ ಮಾಡಿಕೊಂಡು ಬಳಿಕ ತಮ್ಮ ವೆಬ್‌ಸೈಟ್ ಲಿಂಕ್ ಕಳಿಸಿ ಹೂಡಿಕೆ ಮಾಡುವಂತೆ ಅಮಿಷವೊಡ್ಡಿದ್ದರು.
ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ ಖಾತೆಯಿಂದ ಹಂತಹಂತವಾಗಿ 8.13 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ಬಳಿಕ ಲಕಮನಹಳ್ಳಿ ಅವರ ನೆಕ್ಸ್ ಖಾತೆಯನ್ನು ಪ್ರೀಜ್ ಮಾಡಿದಂತೆ ತೋರಿಸಿದ್ದರು. ಅಲ್ಲದೆ, ಹೆಚ್ಚಿನ ಹಣವನ್ನು ಮತ್ತೆ ಹೂಡಿಕೆ ಮಾಡಿದರೆ ಮಾತ್ರ ವಿಥ್ ಡ್ರಾ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು. ಆದರೆ ದೂರು ದಾಖಲಿಸಿಕೊಳ್ಳಲು ಸೈಬರ್ ಕ್ರೈಂ ಪೊಲೀಸರು ಹಿಂದೇಟು ಹಾಕಿದ್ದರು. ಈ ನಕ್ಸ್ ಕಾಯಿನ್ ವಂಚನೆ ಪ್ರಕರಣದ ಕುರಿತಂತೆ ಪಬ್ಲಿಕ್ ನೆಕ್ಸ್ಟ್ ಸವಿವರ ವರದಿ ಪ್ರಕಟಿಸಿತ್ತು. ಜತೆಗೆ ಮಹಾನಗರ ಪೊಲೀಸ್ ಆಯುಕ್ತರ ಗಮನಕ್ಕೂ ತರಲಾಗಿತ್ತು. ವಂಚನೆಗೀಡಾದವರಿಂದ ದೂರು ಪಡೆದಿರುವ ಸಿಇಎನ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
Kshetra Samachara
10/11/2021 11:07 am