ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ಖಾತೆ ಬಳಸಿ ವಂಚನೆ: ಸೈಬರ್ ಠಾಣೆಯಲ್ಲಿ ದೂರು ದಾಖಲು

ಹುಬ್ಬಳ್ಳಿ: ಪ್ಲಿಪ್‌ಕಾರ್ಟ್‌ನಲ್ಲಿ ನಕಲಿ ಖಾತೆ ತೆರೆದು ನಗರದ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ನಡೆದಿದೆ.

ನಗರದ ಗದಗ ರಸ್ತೆ ಸದಾಶಿವ ಕಾಲನಿಯ ಈಶ್ವರರಾವ್ ಎಂ. ಎಂಬುವವರು ಪ್ಲಿಪ್ ಕಾರ್ಟ್ ಪೇ ಲೇಟರ್ ಖಾತೆಯನ್ನು ಅಪರಿಚಿತರು ತಮ್ಮ ಇಮೇಲ್ ಐಡಿಗೆ ಬದಲಿಸಿಕೊಂಡು ಎಂಟು ವಸ್ತುಗಳನ್ನು ಎಕ್ಸಪ್ರೆಸ್ ಡೆಲಿವರಿ ಮೂಲಕ ಆರ್ಡರ್ ಮಾಡಿ ಪಡೆದುಕೊಂಡಿದ್ದಾರೆ.

ತೆಲಂಗಾಣ ರಾಜ್ಯದ ವ್ಯಕ್ತಿ ಈ ಮೋಸ ಮಾಡಿದ್ದು, ದುಬಾರಿ ಬೆಲೆಯ ಮೊಬೈಲ್, ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿದ್ದಾರೆ. ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ಈಶ್ವರರಾವ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.

Edited By : Nagaraj Tulugeri
Kshetra Samachara

Kshetra Samachara

07/11/2021 12:39 pm

Cinque Terre

85.11 K

Cinque Terre

2

ಸಂಬಂಧಿತ ಸುದ್ದಿ