ಧಾರವಾಡ: ಮಹಿಳೆಯ ಪರ್ಸ್ ಕದ್ದು ಎಸ್ಕೇಪ್ ಆಗುತ್ತಿದ್ದ ಚಾಲಾಕಿ ಕಳ್ಳನನ್ನು ಹಿಡಿದು ಸಾರ್ವಜನಿಕರು ಗೂಸಾ ನೀಡಿ, ಬಳಿಕ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಧಾರವಾಡ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.
ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತಿದ್ದ ಮಹಿಳೆಯೊಬ್ಬರ ಪರ್ಸನ್ನು ಚಾಲಾಕಿ ಕಳ್ಳು ಕದ್ದಿದ್ದಾನೆ. ಬಳಿಕ ಅಲ್ಲಿಂದ ಯಾರಿಗೂ ಅನುಮಾನ ಬರದ ಹಾಗೇ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಮಹಿಳೆ ಬಸ್ ಬಂದ ತಕ್ಷಣ ಎದ್ದು ಹೋಗಲು ಪರ್ಸ್ ನೋಡಿಕೊಂಡಿದ್ದಾರೆ. ಆಗ ಪರ್ಸ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೊತ್ತಿಗೆ ಪರ್ಸ್ ಕದ್ದ ಚಾಲಕಿ ಬಸ ನಿಲ್ದಾಣದಿಂದ ಮುಂಭಾಗದ ಮುಖ್ಯ ರಸ್ತೆಗೆ ತೆರುಳುತ್ತಿರುವುದನ್ನು ನೋಡಿದ ಮಹಿಳೆ ಸ್ಥಳೀಯರಿಗೆ ತಿಳಿಸಿದ್ದಾರೆ. ಕೂಡಲೇ ಅಲರ್ಟ್ ಆದ ಸ್ಥಳೀಯರು ಚಾಲಾಕಿ ಕಳ್ಳನನ್ನು ಹಿಡಿದು ಗೂಸಾ ನೀಡಿದ್ದಾರೆ. ಬಳಿಕ ಬಸ್ ನಿಲ್ದಾಣದ ಚಾಲಕರು ಹಾಗೂ ಅಧಿಕಾರಿಗಳು ಅವನನ್ನು ಹಿಡಿದು ತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿನವರೆಗೂ ಬಸ್ ನಿಲ್ದಾಣದ ಅಧಿಕಾರಿಗಳು ಕಳ್ಳನ ಕುರಿತು ಮಾಹಿತಿ ಸಂಗ್ರಕ್ಕೆ ಮುಂದಾಗಿದ್ದು, ಆದರೆ ಚಾಲಾಕಿ ಕಳ್ಳ ಯಾವುದೇ ತನ್ನ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಅಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಉಪನಗರ ಠಾಣೆಯ ಪೊಲೀಸರು ಸದ್ಯ ಕಳನನ್ನು ವಶಕ್ಕೆ ಪಡೆದುಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ.
Kshetra Samachara
04/11/2021 04:47 pm