ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದವರ ಬಂಧನ: ಗೋಕುಲ ಠಾಣೆ ಕಾರ್ಯಾಚರಣೆ

ಹುಬ್ಬಳ್ಳಿ: ಗೋಕುಲ ರಸ್ತೆ ನೆಹರು ನಗರದಲ್ಲಿ ಅ. 28ರಂದು ಐಡಿಬಿಐ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿ ಸೈರನ್ ಆಗುತ್ತಿದ್ದಂತೆ ಓಡಿ ಹೋಗಿದ್ದ ನಾಲ್ವರು ಆರೋಪಿಗಳನ್ನು ಗೋಕುಲ ರೋಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯುವರಾಜ ಪಲ್ಲೇದ, ಕಾರ್ತಿಕ ಸಂಕನಕೊಪ್ಪ, ಅಕ್ಷಯ ಕೋಟಿ ಹಾಗೂ ನೀಲಕಂಠ ಗರಗ ಬಂಧಿತರು. ತಡರಾತ್ರಿ 2 ಗಂಟೆ ಸುಮಾರಿಗೆ ಕಟರ್‌ನಿಂದ ಕಿಟಕಿ ಕತ್ತರಿಸಿ ಬ್ಯಾಂಕ್ ಶಾಖೆ ಒಳಗೆ ನುಗ್ಗಿದ್ದರು. ಸಿಸಿಟಿವಿ ಕ್ಯಾಮರಾ ವೈರ್‌ಗಳನ್ನು ಕಿತ್ತು ಹಾಕಿದ್ದರು. ಬಳಿಕ ಬ್ಯಾಂಕ್‌ನ ಸೈರನ್ ಚಾಲೂ ಆಗುತ್ತಿದ್ದಂತೆ ಕಂಗಾಲಾಗಿ ಪರಾರಿಯಾಗಿದ್ದರು.

ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಹಾಗೂ ಸಿಬ್ಬಂದಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳತನಕ್ಕೆ ಬೇಕಾಗಿದ್ದ ಟಿ ಶರ್ಟ್, ಮಂಕಿ ಕ್ಯಾಪ್, ಕೈಗವಸು, ಕಟರ್ ಹಾಗೂ ಇತರೆ ವಸ್ತುಗಳನ್ನು ಈ ಖದೀಮರು ಆನ್‌ಲೈನ್ ಮೂಲಕ ಖರೀದಿಸಿದ್ದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ.

Edited By : Nirmala Aralikatti
Kshetra Samachara

Kshetra Samachara

01/11/2021 10:00 am

Cinque Terre

25.98 K

Cinque Terre

3

ಸಂಬಂಧಿತ ಸುದ್ದಿ