ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ರಶ್ಮಿ ಬೂದಪ್ಪನವರ ಎಂಬ ಯುವತಿ ನಾಪತ್ತೆ

ಹುಬ್ಬಳ್ಳಿ : ನಗರದ ಶಿಂಪಿ ಗಲ್ಲಿಯ ರಶ್ಮಿ ಪ್ರಕಾಶ್ ಬೂದಪ್ಪನವರ (21) ಎಂಬ ಯುವತಿ ದಿ. 21 ರಿಂದ ಕಾಣೆಯಾಗಿದ್ದಾಳೆ.

ಈ ಬಗ್ಗೆ ದಿ. 26 ರಂದು ಪೊಲೀಸರಿಗೆ ದೂರು ನೀಡಿರುವ ಯುವತಿ ಚಿಕ್ಕಪ್ಪ ರಮೇಶ್, ತಮ್ಮ ಸಹೋದರ ಪ್ರಕಾಶ್ ಅವರ ಮಗಳು ರಶ್ಮಿ ಶಿರೂರ್ ಪಾರ್ಕ್ ದಲ್ಲಿರುವ ಸುಕ್ರೂತಿ ಕಾಲೇಜಿನ ಲೈಬ್ರರಿಯಿಂದ ಪುಸ್ತಕ ತರುತ್ತೇನೆಂದು ಅ. 21 ರಂದು ಮುಂಜಾನೆ 10 ಗಂಟೆಗೆ ಮನೆಯಿಂದ ಹೋದವಳು ಮರಳಿ ಬಂದಿಲ್ಲ. ಕಾಲೇಜಿಗೂ ಹೋಗಿಲ್ಲ ಹಾಗೂ ಮನೆಗೂ ವಾಪಸ್ ಬಂದಿಲ್ಲ. ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ. ಅವಳನ್ನು ಹುಡುಕಿ ಕೊಡಬೇಕೆಂದು ಎಂದು ದಿ. 26 ರಂದು ನೀಡಿದ ದೂರಿನಲ್ಲಿ ಕೋರಿದ್ದಾರೆ.

ಘಂಟಿಕೇರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಯುವತಿ ಶೋಧ ಆರಂಭಿಸಿದ್ದಾರೆ.

Edited By :
Kshetra Samachara

Kshetra Samachara

29/10/2021 10:01 am

Cinque Terre

21.95 K

Cinque Terre

4

ಸಂಬಂಧಿತ ಸುದ್ದಿ