ಗದಗ: ಅಂಗಡಿಯ ಮೇಲ್ಛಾವಣಿ ಶೀಟ್ ಕಟ್ ಮಾಡಿ ಬ್ಯಾಂಗಲ್ಸ್ ಸ್ಟೋರ್ ಕಳ್ಳತನ ಮಾಡಿದ ಘಟನೆ ಗದಗ ನಗರದ ಹಳೆಯ ಬಸ್ ನಿಲ್ದಾಣದ ಸಮೀಪದ ಬಳೆ ಅಂಗಡಿಯಲ್ಲಿ ನಡೆದಿದೆ.
ರಾಜು ಕಟಾರಿ ಎಂಬುವವರಿಗೆ ಸೇರಿದ ವಿಷ್ಣು ಬ್ಯಾಂಗಲ್ಸ್ ಸ್ಟೋರ್ಸ್. ಸ್ಟೋರ್ ನಲ್ಲಿದ ಸುಮಾರು ಐವತ್ತು ಸಾವಿರ ರೂಪಾಯಿ ಕಳ್ಳತನ ಮಾಡಿದ್ದು, ಇನ್ನೂ ಸಿಸಿ ಟಿವಿ ಬಂದ್ ಮಾಡಿ ಮಾಲೀಕ ಮನೆಗೆ ಹೋಗಿದ್ದ. ಈ ನಿಟ್ಟಿನಲ್ಲಿ
ಸಲೀಸಾಗಿ ಕಳ್ಳತನ ಮಾಡಿ ಖದೀಮರು ಎಸ್ಕೇಪ್ ಆಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತಿದ್ದು,ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
28/10/2021 05:21 pm