ಹುಬ್ಬಳ್ಳಿ : ಕೌನ್ ಬನೆಗಾ ಕರೋಡಪತಿ ಲಕ್ಕಿ ಡ್ರಾ ಹೆಸರಿನಲ್ಲಿ, ಹುಬ್ಬಳ್ಳಿಯ ಮಹಿಳೆ ಒಬ್ಬರಿಗೆ ಸುಮಾರು 1.28 ಲಕ್ಷ ರೂ. ವಂಚನೆ ಮಾಡಿದ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಕೆಬಿಸಿ ಲಕ್ಕಿ ಡ್ರಾ ದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖೇಶ ಅಂಬಾನಿ ಪೋಟೋಗಳನ್ನು ಬಳಸಿ, ಹುಬ್ಬಳ್ಳಿಯ ಮನಸೂರ ಮಕಾನದಾರ ಎಂಬ ಮಹಿಳೆಯೊಬ್ಬರ ವಾಟ್ಸಪ್ ನಂಬರ್ ಗೆ, ಅಪರಿಚಿತ ವ್ಯಕ್ತಿ, 25 ಲಕ್ಷ ರೂ ಲಕ್ಕಿ ಲಾಟರಿ ಹತ್ತಿದೆ ಎಂದು ಸಂದೇಶ ಕಳಿಸಿದ್ದಾನೆ. ನಂತರ 25 ಲಕ್ಷದ ಲಕ್ಕಿ ಡ್ರಾ ಲಾಟರಿ ಹತ್ತಿದ್ದು , ಅದನ್ನು ಖಾತೆಗೆ ಜಮಾ ಮಾಡಲು ಇನ್ಶುರೆನ್ಸ್ , ಕಸ್ಟಮ್ ಚಾರ್ಜ್ ಸೇರಿದಂತೆ ಇತರ ಚಾರ್ಜ್ ಹೆಸರಿನಲ್ಲಿ ನೆಪ ಹೇಳಿ, ಹಂತ ಹಂತವಾಗಿ ಸುಮಾರು 1.28 ಲಕ್ಷ ರೂ. ಆನ್‌ಲೈನ್ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ಕುರಿತು ಹಳೆ ಹುಬ್ಬಳ್ಳಿ ಮತ್ತು ಹುಬ್ಬಳ್ಳಿ - ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/10/2021 03:11 pm