ಹುಬ್ಬಳ್ಳಿ : ಕಳೆದ ಕೆಲವು ದಿನಗಳಿಂದ ಮತಾಂತರದ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಇಂದು ಭಜರಂಗದಳದ ಕಾರ್ಯಕರ್ತರು ಚರ್ಚಿನೊಳಗೆ ನುಗ್ಗಿ, ಪ್ರಾರ್ಥನೆಗೆ ಅಡ್ಡಿ ಪಡಿಸಿರುವ ಆರೋಪ ಕೇಳಿಬಂದಿರುವ ಘಟನೆ, ಹುಬ್ಬಳ್ಳಿಯ ಬೈರಿದೇವರಕೊಪ್ಪದ ಬಳಿಯಿರುವ ಚರ್ಚ್ ನಲ್ಲಿ ನಡೆದಿದೆ.
ಚರ್ಚ್ ದಲ್ಲಿ ಇಂದು ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡುತ್ತಿದ್ದ ವೇಳೆ, ಏಕಾಏಕಿಯಾಗಿ ಚರ್ಚ್ ಒಳಗೆ ನುಗ್ಗಿದ ಭಜರಂಗದ ಕಾರ್ಯಕರ್ತರು, ಪ್ರಾರ್ಥನೆಗೆ ಅಡ್ಡಿ ಪಡಿಸಿದ್ದಾರೆ.
ಈ ವೇಳೆ ಎರಡು ಕೋಮಿನವರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಕೂಡಲೇ ವಿಷಯ ತಿಳಿದ ನವನಗರದ ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
17/10/2021 02:19 pm