ಹುಬ್ಬಳ್ಳಿ: ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ ಸಲಗ ಚಿತ್ರದ ಮೊದಲ ಶೋ ಮುಕ್ತಾಯಗೊಂಡು ಜನರಲ್ಲೇ ಹೊರ ಬರುತ್ತಿರುವ ಸಂದರ್ಭದಲ್ಲಿ ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡಿದ ಘಟನೆ ಹುಬ್ಬಳ್ಳಿಯ ಅಪ್ಸರಾ ಟಾಕೀಸ್ ಮುಂದೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪು ಹೊಡೆದಾಡಿಕೊಂಡಿದ್ದು, ಸಿನಿಮಾ ನೋಡಲು ಬಂದವರೇ ಹೊಡೆದಾಡಿದ್ದಾರೆ ಎಂದು ಸ್ಥಳೀಯರೊಬ್ಬರು ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
ಗಲಾಟೆಯಲ್ಲಿ ಪಾಲ್ಗೊಂಡವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Kshetra Samachara
14/10/2021 05:00 pm