ಹುಬ್ಬಳ್ಳಿ: ಮಕ್ಕಳು ಕೆಟ್ಟವರು ಹುಟ್ಟಬಹುದು. ಆದರೆ ಹುಟ್ಟಿದ ಮಕ್ಕಳ ಪಾಲಿಗೆ ಹೆತ್ತವರು ಎಂದಿಗೂ ಕೆಟ್ಟವರಾಗಿ ಇರುವುದಿಲ್ಲ ಎಂಬುವಂತ ಗಾದೆ ಮಾತೊಂದಿದೆ. ಆದರೆ ಇದಕ್ಕೆ ವಿರುದ್ಧ ಎಂಬುವಂತೇ ಹಣದ ಆಸೆಗೆ ತನ್ನ ಮಗಳಿಗೆ ಪಾಲಕರು ಖಳನಾಯಕರಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು..ಹೀಗೆ ಪೋಲಿಸ್ ಠಾಣೆಯ ಮೆಟ್ಟಿಲು ಏರುತ್ತಿರುವ ಈ ಮಹಿಳೆಯ ಹೆಸರು ಐಶ್ವರ್ಯಾ ಚಿಕ್ಕಾಡಿ
ಮೂಲತಃ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಯುವತಿ. ಇವಳಿಗೆ ಒಪ್ಪಿಗೆ ಇಲ್ಲದಿದ್ದರೂ ಬೇರೆಯವರ ಹತ್ತಿರ ಹಣ ಪಡೆದುಕೊಂಡು ಮಾರಾಟ ಮಾಡಿರುವುದಾಗಿ ಮಹಿಳೆಯೇ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಾಳೆ. ತಂದೆ ರಮೇಶ ಎಂಬುವವರು ಹಾಗೂ ಕೆಲವು ಮಧ್ಯವರ್ತಿಗಳೊಂದಿಗೆ ಸೇರಿ ಐಶ್ವರ್ಯ ಎಂಬುವವಳನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿ ಯುವತಿ ಮಾಧ್ಯಮದ ಮುಂದೇ ಹೇಳಿಕೊಂಡಿದ್ದಾಳೆ. ಇಂತಹ ಘಟನೆಗಳು ಮಾನವ ಕಳ್ಳಸಾಗಣೆಗೆ ಪುಷ್ಟಿ ನೀಡುವಂತಿವೆ.
ಇನ್ನೂ ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆಗಳಲ್ಲಿ ಇಂತಹ ಅವ್ಯವಸ್ಥೆ ತಲೆದೂರಿದೆ. ಅಲ್ಲದೇ ಈ ಯುವತಿಗೆ ಸುಳ್ಳು ಹೇಳಿ ಮನೆಯವರೇ ಮೋಸ ಮಾಡಿದ್ದಾರೆ ಎಂದು ಯುವತಿಯು ಆರೋಪಿಸುತ್ತಿದ್ದಾಳೆ. ಈ ಬಗ್ಗೆ ಇನ್ನಷ್ಟು ವಿಷಯಗಳನ್ನು ಯುವತಿಯೇ ಹೇಳಿದ್ದಾಳೆ ಕೇಳಿ.
ಒಟ್ಟಿನಲ್ಲಿ ಇಂತಹ ಪ್ರಕರಣಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕುವ ಮೂಲಕ ಮಧ್ಯವರ್ತಿಗಳಿಗೆ ಹಾಗೂ ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಬ್ರೇಕ್ ಹಾಕಬೇಕಿದೆ.
Kshetra Samachara
11/10/2021 04:04 pm