ಹುಬ್ಬಳ್ಳಿ: ಓರ್ವ ಮಹಿಳೆಯ ಅಶ್ಲೀಲ ಛಾಯಾಚಿತ್ರವನ್ನು, ವಾಟ್ಸಪ್ ಗ್ರುಪ್‌ನಲ್ಲಿ ಹರಿಬಿಟ್ಟು ಮಾನಹಾನಿ ಮಾಡಿದ ಪ್ರಕರಣ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಷ್ಟೇ ಅಲ್ಲದೇ ಅ. 7 ರಂದು ಅದೇ ಗ್ರುಪ್‌ನಲ್ಲಿ ಕೆಲ ಕಿಡಿಗೇಡಿಗಳು, ಲೈಂಗಿಕ ದೃಶ್ಯಗಳುಳ್ಳ ಅಶ್ಲೀಲ ವಿಡಿಯೋ ಹಾಕಿ ಮಹಿಳೆಯ ಮಾನಹಾನಿ ಮಾಡುವ ಕೆಲಸ ಮಾಡಿದ್ದಾರೆ. ಈ ಕುರಿತು ಆ ಮಹಿಳೆ ಸೈಬರ್ ಕ್ರೈಂ ದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಟ್ಟವರ ಪತ್ತೆಗೆ ಮುಂದಾಗಿದ್ದಾರೆ.
Kshetra Samachara
11/10/2021 11:24 am