ಹುಬ್ಬಳ್ಳಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ ಸೋಗಿನಲ್ಲಿ, ವೈದ್ಯರೊಬ್ಬರಿಗೆ ಕರೆ ಮಾಡಿ ಕೆವೈಸಿ ಅಪ್ಲೇಟ್ ಮಾಡಬೇಕಿದೆ ಎಂದು ಸುಳ್ಳು ಹೇಳಿ, ವಿವಿಧ ಮಾಹಿತಿ ಪಡೆದು ಅವರ ಖಾತೆಯಿಂದ ಬರೊಬ್ಬರಿ 1,74,450 ರೂ . ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದ ಡಾ. ಸವಿತಾ ದೇಶಪಾಂಡೆ ಅವರ ಮೊಬೈಲ್‌ಫೋನ್‌ಗೆ ಅ. 8 ರಂದು ಅಪರಿಚಿತರು ಸಂದೇಶ ಕಳುಹಿಸಿದ್ದರು. ನಿಮ್ಮ ಕೆವೈಸಿ ಅಪ್ಲೇಟ್ ಮಾಡಬೇಕಿದೆ ಎಂದು ಲಿಂಕ್ ಕಳುಹಿಸಿದ್ದರು. ಬಳಿಕ ಕರೆ ಮಾಡಿ ತಾನು ಎಸ್‌ಬಿಐ ಕೆವೈಸಿ ಅಧಿಕಾರಿ ಎಂದು ನಂಬಿಸಿದ್ದರು. ಬಳಿಕ ಬ್ಯಾಂಕ್ ಖಾತೆಯ ವಿವಿಧ ಮಾಹಿತಿ ಪಡೆದು ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
Kshetra Samachara
11/10/2021 11:05 am